ಕರ್ನಾಟಕ

karnataka

ಪಂಜಾಬ್ ವಿಧಾನಸಭೆಗೆ ಮುತ್ತಿಗೆ ಹಾಕಿದ ಬಿಜೆಪಿ

By

Published : Mar 9, 2023, 10:28 PM IST

ETV Bharat / videos

Watch.. ಪಂಜಾಬ್ ವಿಧಾನಸಭೆಗೆ ಮುತ್ತಿಗೆ ಹಾಕಿದ ಬಿಜೆಪಿ: ಪ್ರಭಟನಾಕಾರರ ಮೇಲೆ ಜಲಫಿರಂಗಿಗಳ ಪ್ರಯೋಗ

ಚಂಡೀಗಢ (ಪಂಜಾಬ್):ಪಂಜಾಬ್ ವಿಧಾನಸಭೆ ಅಧಿವೇಶನದ ನಾಲ್ಕನೇ ದಿನವಾದ ಇಂದು ಪ್ರತಿಪಕ್ಷಗಳು ವಿಧಾಸಭೆಗೆ ಮುತ್ತಿಗೆ ಹಾಕಿರುವುದು ಕಂಡುಬಂದಿತು. ಭಾರತೀಯ ಜನತಾ ಪಕ್ಷವು ಪಂಜಾಬ್ ವಿಧಾನಸಭೆಗೆ ಘೇರಾವ್ ಹಾಕಿತು. ಈ ವೇಳೆ, ಬಿಜೆಪಿ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಸ್ತೆಗಿಳಿದು ಬೃಹತ್​ ಪ್ರತಿಭಟನೆ ನಡೆಸಿದರು.

ಪಂಜಾಬ್‌ನಲ್ಲಿ ಹದಗೆಟ್ಟ ಪರಿಸ್ಥಿತಿ: ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡ ಮನ್‌ಪ್ರೀತ್ ಸಿಂಗ್ ಬಾದಲ್ ಅವರು, ಪಂಜಾಬ್‌ನಲ್ಲಿ ಈಗಾಗಲೇ ಕಾನೂನು ಸುವ್ಯವಸ್ಥೆ ಮೊದಲೇ ಹದಗೆಟ್ಟಿತ್ತು. ಆದರೆ, ಆಮ್ ಆದ್ಮಿ ಪಕ್ಷ ಬಂದ ನಂತರ ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಥೆ ಮತ್ತಷ್ಟು ಹದಗೆಟ್ಟು ಹೋಗಿದೆ. ಕೆಟ್ಟದ್ದು ಹಾಗೂ ಕಷ್ಟಕಾಲ ಬಂದಾಗಲೆಲ್ಲಾ ನಾನು ಬಿಜೆಪಿಯ ಗುರಾಣಿಯಾಗಿರುತ್ತೇನೆ ಎಂದರು. ಈ ಪ್ರತಿಭಟನೆಯು ಪಂಜಾಬ್‌ನ ಕಾನೂನು ಮತ್ತು ಸುವ್ಯವಸ್ಥೆಗೆ ವಿರುದ್ಧವಾಗಿದೆ. ಆದ್ದರಿಂದ ನಾವು ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡುವುದಿಲ್ಲ ಎಂದು ಅಶ್ವಿನಿ ಶರ್ಮಾ ಹೇಳಿದರು.

ಬಿಜೆಪಿ ವಿಧಾನಸಭೆಗೆ ಘೇರಾವ್ ಹಾಕಲು ವಿಫಲ:ಭಾರತೀಯ ಜನತಾ ಪಕ್ಷದ ವಿರೋಧ ಪಕ್ಷದ ನಾಯಕರು ಪಂಜಾಬ್ ವಿಧಾನಸಭೆಯನ್ನು ಘೇರಾವ್ ಮಾಡುವಲ್ಲಿ ಯಶಸ್ವಿಯಾಗಲಿಲ್ಲ. ಅವರು ಪಂಜಾಬ್ ಅಸೆಂಬ್ಲಿ ಕಡೆಗೆ ಮೆರವಣಿಗೆ ಮಾಡುವ ಮೊದಲೇ ಪೊಲೀಸ್​ ಆಡಳಿತವು ಅವರ ಮೇಲೆ ಜಲ ಫಿರಂಗಿಗಳನ್ನು ಬಳಸಿತು. ಹಲವು ಬಿಜೆಪಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ. ಕೆಲವರನ್ನು ಜಲಫಿರಂಗಿಗಳ ಮೂಲಕ ಓಡಿಸಲಾಯಿತು.

ಇದನ್ನೂ ಓದಿ:ಮದ್ಯ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ಬಂಧಿಸಿದ ಇಡಿ..!

ABOUT THE AUTHOR

...view details