ಕರ್ನಾಟಕ

karnataka

ಬಸ್​ಗೆ ಬೈಕ್ ಡಿಕ್ಕಿ

ETV Bharat / videos

ತುಮಕೂರು: ತಿರುವು ಪಡೆಯುತ್ತಿದ್ದ ಬಸ್​ಗೆ ವೇಗದಿಂದ ಬಂದು ಡಿಕ್ಕಿ ಹೊಡೆದ ಬೈಕ್​- ವಿಡಿಯೋ - ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ

By ETV Bharat Karnataka Team

Published : Dec 11, 2023, 2:28 PM IST

ತುಮಕೂರು:ಅತಿವೇಗವಾಗಿ ಬಂದು ಬಸ್​​ಗೆ ಬೈಕ್​​ ಡಿಕ್ಕಿ ಹೊಡೆದಿರುವ ಘಟನೆ ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ. ಈ ಭೀಕರ ದೃಶ್ಯ ಅದೇ ಮಾರ್ಗವಾಗಿ ಬರುತ್ತಿದ್ದ ಮತ್ತೊಂದು ಬೈಕ್​ ಸವಾರನ ಹೆಲ್ಮೆಟ್ ಕ್ಯಾಮರಾದಲ್ಲಿ ಸೆರೆಯಾಗಿದೆ. 

ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣಕ್ಕೆ ತೆರಳಲು ತಿರುವು ತೆಗೆದುಕೊಳ್ಳುತ್ತಿದ್ದ ವೇಳೆ ವೇಗವಾಗಿ ಬಂದ ಬೈಕ್​ ಡಿಕ್ಕಿ‌ ಹೊಡೆದಿದೆ. ಪರಿಣಾಮ ಸವಾರ ಒಮ್ಮೆಲೇ ಗಾಳಿಯಲ್ಲಿ ಗರಗರನೆ ತಿರುಗಿ ರಸ್ತೆಗೆ ಅಪ್ಪಳಿಸಿದ್ದಾನೆ. ಅದೃಷ್ಟವಶಾತ್​ ಹೆಲ್ಮೆಟ್ ಧರಿಸಿದ್ದರಿಂದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬೆಂಗಳೂರು ಕಡೆಯಿಂದ‌ ಬೈಕ್ ಸವಾರ ಬರುತ್ತಿದ್ದು, ಆತನ ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಚಿಕ್ಕಮಗಳೂರು : ಎರಡು ಸರ್ಕಾರಿ ಬಸ್​ಗಳ ಮುಖಾಮುಖಿ ಡಿಕ್ಕಿ, 20 ಜನರಿಗೆ ಗಾಯ

ಪ್ರತ್ಯೇಕ ಪ್ರಕರಣ:ಮಂಡ್ಯದಲ್ಲಿ ಸೋಮವಾರ ಬೆಳಗ್ಗೆ ಮಹಿಳೆ ಮೇಲೆ ಸರ್ಕಾರಿ ಬಸ್​ ಹರಿದು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನಾವಳಿಯ ದೃಶ್ಯ ಅಲ್ಲೆ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಸ್​ನ ಚಕ್ರ ಆಕೆಯ ಮೇಲೆ ಹರಿದು ಹೋಗಿದ್ದರಿಂದ ಸ್ಥಳದಲ್ಲೇ ಮಹಿಳೆಯ ಪ್ರಾಣ ಪಕ್ಷಿ ಹಾರಿಹೋಗಿದೆ.  

ABOUT THE AUTHOR

...view details