G -20 ಶೃಂಗಸಭೆ ನಡೆಯಲಿರುವ ಸ್ಥಳ ಹೇಗಿದೆ ಗೊತ್ತಾ? ಹಾಗಾದರೆ ಇಲ್ಲಿದೆ ನೋಡಿ ವಿಡಿಯೋ..! - visuals of premises of the itpo complex
ನವದೆಹಲಿ: ಭಾರತವು ಈ ವರ್ಷದ ಕೊನೆಯಲ್ಲಿ G20 ಶೃಂಗಸಭೆ ಆಯೋಜಿಸಲಿದೆ. ಭಾರತದ ಅಧ್ಯಕ್ಷತೆಯಲ್ಲಿ ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕರ ಕೂಟವು ನವೆಂಬರ್ ತಿಂಗಳಲ್ಲಿ ನವದೆಹಲಿಯಲ್ಲಿ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ದತೆಗಳು ನಡೆಯುತ್ತಿವೆ.
ಪ್ರಗತಿ ಮೈದಾನದ ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್ (ITPO) ಸಂಕಿರ್ಣದಲ್ಲಿ ಜಿ -20 ಸಭೆ ನಡಯಲಿದೆ. ಸ್ಥಳದ ಮರು ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಜುಲೈ 26ರಂದು ಇದರ ಉದ್ಘಾಟನೆ ನಡೆಯಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೀಕರಿಸಲಾದ ಜಿ20 ಶೃಂಗಸಭೆ ಸಂಕೀರ್ಣವನ್ನು ಉದ್ಘಾಟನೆ ಮಾಡಲಿದ್ದಾರೆ.
ಪ್ರಗತಿ ಮೈದಾನ ಸಂಕೀರ್ಣ ಎಂದೂ ಕರೆಯಲ್ಪಡುವ ಇದು ಸರಿಸುಮಾರು 123 ಎಕರೆ ವಿಸ್ತೀರ್ಣದೊಂದಿಗೆ, ಭಾರತದ ಅತಿದೊಡ್ಡ ಸಭೆಗಳು, ಪ್ರದರ್ಶನಗಳು, ಸಮ್ಮೇಳನಗಳನ್ನು ನಡೆಸುವ ತಾಣವಾಗಿದೆ. ಇದು ಐಇಸಿಸಿ (ಇಂಟರ್ನ್ಯಾಷನಲ್ ಎನರ್ಜಿ ಕನ್ಸರ್ವೇಶನ್ ಕೋಡ್) ವಿಶ್ವದ ಅಗ್ರ 10 ಪ್ರದರ್ಶನ ಮತ್ತು ಸಮಾವೇಶ ಸಂಕೀರ್ಣಗಳಲ್ಲಿ ತನ್ನ ಸ್ಥಾನವನ್ನು ಗಿಟ್ಟಿಸಿಕೊಳ್ಳಲಿದೆ. ಜರ್ಮನಿಯ ಹ್ಯಾನೋವರ್ ಎಕ್ಸಿಬಿಷನ್ ಸೆಂಟರ್, ಶಾಂಘೈನಲ್ಲಿರುವ ನ್ಯಾಷನಲ್ ಎಕ್ಸಿಬಿಷನ್ ಮತ್ತು ಕನ್ವೆನ್ಷನ್ ಸೆಂಟರ್ (ಎನ್‌ಇಸಿಸಿ) ನಂತಹ ಬೃಹತ್ ಸಂಕಿರ್ಣಗಳಿಗೆ ಇದು ಪ್ರತಿ ಸ್ಪರ್ಧಿಯಾಗಲಿದೆ.