ಮೊಮ್ಮಗಳ ಜೊತೆಗೆ ಆಟವಾಡಿ ಖುಷಿಪಟ್ಟ ವೀರಣ್ಣ ಚರಂತಿಮಠ.. - ರಿಲ್ಯಾಕ್ಸ್ ಮೂಡ್ನಲ್ಲಿ ರಾಜಕೀಯ ನಾಯಕರು
ಬಾಗಲಕೋಟೆ:ಕೆಳದ ಒಂದು ತಿಂಗಳಿನಿಂದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸಂಚಾರ ಮಾಡಿ ಸುಸ್ತಾಗಿರುವ ರಾಜಕಾರಣಿಗಳು ಈಗ ರಿಲ್ಯಾಕ್ಸ್ ಮೂಡ್ನಲ್ಲಿ ಇರುವುದು ಕಂಡುಬಂತು. ಚುನಾವಣೆ ಮುಗಿದಿರುವ ಬೆನ್ನಲ್ಲೇ ಎಲ್ಲಾ ರಾಜಕೀಯ ಜಂಟಾಟಗಳನ್ನು ಬಿಟ್ಟು ತಮ್ಮ ಕುಟುಂಬದೊಂದಿಗೆ ಕಾಲ ಕಳೆದರು. ಹೌದು, ಬಾಗಲಕೋಟೆ ನಗರದ ಬಿಜೆಪಿ ಪಕ್ಷದ ಅಭ್ಯರ್ಥಿ ವೀರಣ್ಣ ಚರಂತಿಮಠ ತಮ್ಮ ಮೊಮ್ಮಕ್ಕಳೊಂದಿಗೆ ಆಟವಾಡುವ ಮೂಲಕ ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ.
ವೀರಣ್ಣ ಚರಂತಿಮಠ ಅವರು ಒಂದು ತಿಂಗಳಿನಿಂದಲೂ ಪ್ರತಿದಿನ ಹಗಲು ರಾತ್ರಿ ಎನ್ನದೇ ಚುನಾವಣೆ ಹಿನ್ನೆಲೆ ಪ್ರಚಾರ, ಸಭೆ ಹಾಗೂ ಸಮಾರಂಭದಲ್ಲಿ ತುಂಬಾ ಬ್ಯುಸಿಯಾಗಿದ್ದರು. ನಿನ್ನೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇಂದು ಮನೆಯಲ್ಲಿ ತಮ್ಮ ಮೊಮ್ಮಕ್ಕಳೊಂದಿಗೆ ಆಟವಾಡಿ ತುಂಬಾ ಸಂತಸಪಟ್ಟರು.
ಮೇ 13ರಂದು ಮತ ಎಣಿಕೆ ನಡೆಯುತ್ತಿದ್ದು, ಫಲಿತಾಂಶ ಏನಾಗಲಿದೆ ಎಂಬ ಕುತೂಹಲದ ಮಧ್ಯೆಯೇ ಜಿಲ್ಲೆಯ ಅಭ್ಯರ್ಥಿಗಳು ಸಮಯವನ್ನು ದೂಡುತ್ತಿದ್ದಾರೆ. ತಮ್ಮ ಮನೆಯವರಿಗಾಗಿ ಸಮಯ ನೀಡುವ ಮೂಲಕ ಗುರವಾರ ಎಲ್ಲಾ ರಾಜಕೀಯ ಪಕ್ಷದ ಗಣ್ಯರು ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ.
ಇದನ್ನೂ ಓದಿ:ರಿಲಾಕ್ಸ್ ಮೂಡ್ನಲ್ಲಿ ನಾಯಕರು, ಆಪ್ತರೊಂದಿಗೆ ಚಹಾಕೂಟ : 141 ಸ್ಥಾನ ಗೆಲ್ಲುತ್ತೇವೆ ಎಂದ ಡಿಕೆಶಿ