ಕಾಡು ಹಂದಿ ಮೇಲೆ ಮಿಂಚಿನ ವೇಗದಲ್ಲಿ ದಾಳಿ ಮಾಡಿದ ಹುಲಿ: ವಿಡಿಯೋ - ಹುಲಿ ಸಂರಕ್ಷಿತ ಅರಣ್ಯ
Published : Jan 15, 2024, 1:17 PM IST
ಮಹಾರಾಷ್ಟ್ರದ ತಡೋಬಾ ಹುಲಿ ಸಂರಕ್ಷಿತ ಅರಣ್ಯದಲ್ಲಿ ಪ್ರವಾಸಿಗರು ಸಫಾರಿ ಮಾಡುತ್ತಿದ್ದಾಗ ಹುಲಿಯೊಂದು ಕಾಡು ಹಂದಿಯ ಮೇಲೆ ದಾಳಿ ಮಾಡಿರುವ ದೃಶ್ಯ ದೊರೆತಿದೆ. ಉದ್ಯಾನವನದಲ್ಲಿ ಪ್ರಾಣಿಗಳನ್ನು ನೋಡಲು ಪ್ರವಾಸಿಗರು ಸಫಾರಿ ವಾಹನ ಹತ್ತಿ ಅರಣ್ಯ ವೀಕ್ಷಿಸುತ್ತಾರೆ. ಅದೇ ರೀತಿ ಜೀಪ್ ಹತ್ತಿದ ಕೆಲ ಪ್ರವಾಸಿಗರು ಹುಲಿಗಳಿದ್ದ ಪ್ರದೇಶಕ್ಕೆ ಭೇಟಿ ನೀಡುತ್ತಾರೆ.
ಈ ಸಂದರ್ಭದಲ್ಲಿ ಪ್ರವಾಸಿಗರಿಗೆ ದೊಡ್ಡ ಹುಲಿ ಕಾಣಿಸಿದೆ. ಕೂಡಲೇ ಪ್ರವಾಸಿಗರು ತಮ್ಮ ಕ್ಯಾಮರಾಗಳಲ್ಲಿ ದೃಶ್ಯ ಸೆರೆ ಹಿಡಿಯಲು ಮುಂದಾದರು. ಕಾಡು ಹಂದಿ ಬೇಟೆಗೆ ಹೊಂಚು ಹಾಕುತ್ತಿದ್ದ ಹುಲಿಯನ್ನು ಪ್ರವಾಸಿಗರು ಕುತೂಹಲದ ಕಣ್ಣುಗಳಿಂದ ನೋಡುತ್ತಿದ್ದರು. ಪ್ರವಾಸಿಗರು ನೋಡುನೋಡುತ್ತಿದ್ದಂತೆಯೇ ಹುಲಿ, ಕಾಡುಹಂದಿಯ ಮೇಲೆ ಮಿಂಚಿನ ವೇಗದಲ್ಲಿ ದಾಳಿ ಮಾಡಿತು.
ಕಾಡು ಹಂದಿಯ ಕತ್ತು ಹಿಡಿದು ಕೊಂದು ಹಾಕಿತು. ಕೆಲವೇ ನಿಮಿಷದಲ್ಲಿ ಹುಲಿ ದಾಳಿಗೆ ಕಾಡುಹಂದಿ ಆಹಾರವಾಯಿತು. ಈ ದೃಶ್ಯಗಳನ್ನು ಪ್ರವಾಸಿಗರು ತಮ್ಮ ಕ್ಯಾಮರಾ ಮತ್ತು ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋ ವೈರಲ್ ಆಗುತ್ತಿದೆ.
ಇದನ್ನೂ ಓದಿ:ಮೈಸೂರು: ನಾಲೆ ಪೈಪ್ಲೈನ್ನಲ್ಲಿ ಸಿಲುಕಿದ್ದ ಎರಡು ಚಿರತೆಗಳ ರಕ್ಷಣೆ