ಆಂಬ್ಯುಲೆನ್ಸ್ ಬಳಿ ನಿಂತು ಡ್ಯಾನ್ಸರ್ಗಳ ಅಶ್ಲೀಲ ನೃತ್ಯ.. ವಿಡಿಯೋ ವೈರಲ್ - ಆರ್ಕೆಸ್ಟ್ರಾ
ಸಿವಾನ್ (ಬಿಹಾರ): ರೋಗಿಗಳನ್ನು ತಕ್ಷಣಕ್ಕೆ ಆಸ್ಪತ್ರೆಗೆ ಸಾಗಿಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದಿರುವ ಆಂಬ್ಯುಲೆನ್ಸ್‌ನ ಹೊರಗೆಯೇ ಡ್ಯಾನ್ಸರ್ಗಳು ನೃತ್ಯ ಮಾಡಿರುವ ವಿಡಿಯೋ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ವೈರಲ್ ಆಗಿದೆ. ಇಲ್ಲಿನ ಗೌರಿ ಗ್ರಾಮದಲ್ಲಿ ಜನವರಿ 2ರಂದು ಮದುವೆ ಸಮಾರಂಭ ನಿಮಿತ್ತ ಆರ್ಕೆಸ್ಟ್ರಾ ತರಿಸಲಾಗಿತ್ತು. ಅದೇ ಸಮಯದಲ್ಲಿ ಹೋಗುತ್ತಿದ್ದ ಆಂಬ್ಯುಲೆನ್ಸ್ ಸಿಬ್ಬಂದಿ, ತಮ್ಮ ಆಂಬ್ಯುಲೆನ್ಸ್ ನಿಲ್ಲಿಸಿ ಆರ್ಕೆಸ್ಟ್ರಾದ ಡ್ಯಾನ್ಸರ್ಗಳು ಮಾಡುತ್ತಿದ್ದ ಡ್ಯಾನ್ಸ್ ನೋಡ ತೋಡಗಿದ್ದಾರೆ. ಈ ವೇಳೆ ಆಂಬ್ಯುಲೆನ್ಸ್ ಸಮೀಪವೇ ಬಂದು ಅಶ್ಲೀಲ ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ.ಸರ್ಫರಾಜ್ ಈ ಘಟನೆಯು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.
Last Updated : Feb 3, 2023, 8:38 PM IST