ಕರ್ನಾಟಕ

karnataka

ರೈಲ್ವೆ ಅಂಡರ್ ಪಾಸ್‌ ದಾಟಿದ ವಿಡಿಯೋ

ETV Bharat / videos

ತಲೆ ಮೇಲೆ ಬೈಕ್​ ಹೊತ್ತುಕೊಂಡು ರೈಲ್ವೆ ಅಂಡರ್ ಪಾಸ್‌ ದಾಟಿದ ರಾಯಚೂರು ಬಾಹುಬಲಿ - ವಿಡಿಯೋ ವೈರಲ್​ - ​ ಈಟಿವಿ ಭಾರತ್​ ಕರ್ನಾಟಕ

By

Published : Jun 29, 2023, 5:12 PM IST

ರಾಯಚೂರು :ರೈಲ್ವೆ ಅಂಡರ್ ಪಾಸ್‌ನಲ್ಲಿ ಮಳೆ ನೀರು ನಿಲುಗಡೆಯಿಂದಾಗಿ ಬೈಕ್ ಸವಾರನೋರ್ವ ಬಾಹುಬಲಿಯಂತೆ ತಲೆಯ ಮೇಲೆ ಬೈಕ್​ ಹೊತ್ತುಕೊಂಡು ಅಂಡರ್‌ಪಾಸ್ ದಾಟಿರುವ ವಿಡಿಯೋ ಒಂದು ಸಖತ್​ ವೈರಲ್ ಆಗಿದೆ. ಕರೆಕಲ್ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಬರುವ ರೈಲ್ವೆ ಅಂಡರ್‌ಪಾಸ್ ಬಳಿ ಈ ದೃಶ್ಯ ಕಂಡು ಬಂದಿದೆ. ಕಳೆದ ಸೋಮವಾರದಂದು ಜಿಲ್ಲೆಯ ವಿವಿಧ ಕಡೆ ಮಳೆ ಸುರಿದಿದ್ದು, ಅಂಡರ್‌ಪಾಸ್ ನಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ನೀರು ನಿಂತು ಕೆರೆಯಂತೆ ನಿರ್ಮಾಣವಾಗಿದೆ. 

ಇದರಿಂದ ಸಾರ್ವಜನಿಕರು ಓಡಾಡುವುದಕ್ಕೆ ಪರದಾಡಿದ್ದು, ವಾಹನ ಸವಾರರು ಕೂಡ ನೀರಿನಲ್ಲಿ ತಮ್ಮ ವಾಹನಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬೈಕ್​ ಸವಾರನೊಬ್ಬ ತನ್ನ ತಲೆಯ ಮೇಲೆ ಬೈಕ್​ ಅನ್ನು ಹೊತ್ತುಕೊಂಡು ಅಂಡರ್‌ಪಾಸ್ ದಾಟಿದ್ದಾನೆ. ಇನ್ನು ಅಂಡರ್ ಪಾಸ್ ನಿರ್ಮಾಣ ಮಾಡುವಾಗ ಮಳೆ ನೀರು ನಿಲ್ಲದಂತೆ ಹರಿದು ಹೋಗುವಂತೆ ಮಾಡಬೇಕಾಗಿತ್ತು. ಆದರೆ ನಿರ್ಮಾಣದ ವೇಳೆ ಈ ಬಗ್ಗೆ ಕ್ರಮ ಕೈಗೊಳ್ಳದೆ ಇರುವುದರಿಂದ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ಎದುರಾಗಿದೆ‌. ಅಲ್ಲದೆ ಈ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲವಂತೆ. 

ಇದನ್ನೂ ಓದಿ :ಮುಂಗಾರು ವಿಳಂಬ, ಬಳ್ಳಾರಿಯಲ್ಲಿ ಬಿತ್ತನೆ ಕಾರ್ಯ ಕುಂಠಿತ: ಬರದ ಆತಂಕದಲ್ಲಿ ರೈತರು

ABOUT THE AUTHOR

...view details