ಕರ್ನಾಟಕ

karnataka

ETV Bharat / videos

ಮೈಸೂರಲ್ಲಿ ವಿಂಟೇಜ್ ಕಾರ್ ಶೋ.. ಹೀಗಿವೆ ನೋಡಿ ಶತಮಾನದ ಹಳೆಯ ಐಷಾರಾಮಿ ಕಾರುಗಳು - minister somashekhar kickoff car show

By

Published : Oct 1, 2022, 1:22 PM IST

Updated : Feb 3, 2023, 8:28 PM IST

ಮೈಸೂರು: ದಸರಾ ಪ್ರಯುಕ್ತ ಹೆಬ್ಬಾಳ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಆಯೋಜಿಸಿದ್ದ ವಿಂಟೇಜ್ ಕಾರ್ ಶೋ ಮತ್ತು ರ‍್ಯಾಲಿಗೆ ಸಚಿವ ಎಸ್.ಟಿ.ಸೋಮಶೇಖರ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. 80, 100 ವರ್ಷ ಹಳೆಯದಾದ ಮ್ಯಾರಿಸ್ ಮೈನರ್, ಅಸ್ಟಿನ್, ರೋಡ್ ಮಾಸ್ಟರ್, ರೋಲ್ಸ್ ರಾಯ್ಸ್ ಸೇರಿದಂತೆ ನಾನಾ ಮಾಡೆಲ್ ಕಾರುಗಳು ಮತ್ತು ಸ್ಕೂಟರ್​​ಗಳ ವೀಕ್ಷಣೆ ಮಾಡಿದ ಸಚಿವರು, ವಿಂಟೇಜ್ ಕಾರಿನಲ್ಲಿ ಸಂಚರಿಸಿದರು. ಇಷ್ಟೊಂದು ಬಗೆಬಗೆಯ ವಿಂಟೇಜ್ ಕಾರುಗಳನ್ನು ಹೊಂದಿರುವ ಉದ್ಯಮಿ ಗೋಪಿನಾಥ್ ಶೆಣೈ ಅವರಿಗೆ ಸರ್ಕಾರದ ಪರವಾನಗಿ ಅಭಿನಂದನೆಗಳು. ಅಮೆರಿಕ, ಆಸ್ಟ್ರೇಲಿಯಾ, ಜರ್ಮನಿ ಸೇರಿದಂತೆ ನಾನಾ ದೇಶಗಳ ತರಹೇವಾರಿ ಕಾರುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. 80, 100 ವರ್ಷಗಳ ಹಳೆಯ ಕಾರುಗಳ ನಿರ್ವಹಣೆ ಮಾಡುವುದು ಸುಲಭದ ಕೆಲಸವಲ್ಲ ಎಂದು ಸಚಿವರು ತಿಳಿಸಿದರು.
Last Updated : Feb 3, 2023, 8:28 PM IST

ABOUT THE AUTHOR

...view details