ತುಮಕೂರಿನಲ್ಲಿ ಕೆಂಪೇಗೌಡ ರಥಯಾತ್ರೆ: ಮೃತ್ತಿಕೆ ಸಂಗ್ರಹಿಸುವ ವೇಳೆ ಕಲಹ - ಈಟಿವಿ ಭಾರತ ಕರ್ನಾಟಕ
ತುಮಕೂರು: ಕೆಂಪೇಗೌಡ ರಥಯಾತ್ರೆ ವೇಳೆ ಮೃತ್ತಿಕೆ(ಮಣ್ಣು) ಸಂಗ್ರಹಿಸಲು ತಿಪಟೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮ ಬೆಂಬಲಿಗರ ಒಕ್ಕಲಿಗರ ಪ್ರಾಬಲ್ಯ ಇರುವ ಸ್ಥಳಗಳಿಗೆ ಮಾತ್ರ ಸಚಿವ ನಾಗೇಶ್ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು. ಈ ವೇಳೆ, ಸ್ಥಳೀಯರು ಕೈ ಕೈ ಮಿಲಾಯಿಸುವ ಹಂತಕ್ಕೆ ತೆರಳಿದ ಘಟನೆ ತಿಪಟೂರು ತಾಲೂಕು ಚಿಕ್ಕ ಹೊನ್ನವಳ್ಳಿ ಗ್ರಾಮದಲ್ಲಿ ನಡೆದಿದೆ. ಸ್ಥಳದಲ್ಲಿದ ಬಿ ಸಿ ನಾಗೇಶ್ ಬೆಂಬಲಿಗರು ಹಾಗೂ ಕೆಲ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಇದನ್ನು ಕಂಡ ಸಚಿವ ನಾಗೇಶ್ ಕೆಲಕಾಲ ಕಕ್ಕಾಬಿಕ್ಕಿಯಾದರು. ಒಕ್ಕಲಿಗರು ಇರುವ ಎಲ್ಲ ಗ್ರಾಮಗಳಿಗೂ ಕೆಂಪೇಗೌಡ ರಾಥಯಾತ್ರೆ ಸಾಗಬೇಕು ಎಂದು ಆಗ್ರಹಿಸಿದರು.
Last Updated : Feb 3, 2023, 8:30 PM IST