ಕರ್ನಾಟಕ

karnataka

ETV Bharat / videos

ರೈಲ್ವೆ ಬ್ರಿಡ್ಜ್ ನಿರ್ಮಿಸುವಂತೆ ಆಗ್ರಹ: ಹಳಿ ಮೇಲೆ‌ ಕುಳಿತು ಗ್ರಾಮಸ್ಥರ ಪ್ರತಿಭಟನೆ - ರೈಲ್ವೆ ಬ್ರಿಡ್ಜ್

By

Published : Jan 31, 2023, 3:37 PM IST

Updated : Feb 3, 2023, 8:39 PM IST

ತುಮಕೂರು:ರೈಲ್ವೆ ಬ್ರಿಡ್ಜ್ ನಿರ್ಮಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ರೈಲ್ವೆ ಹಳಿ ಮೇಲೆ ಕುಳಿತು ಪ್ರತಿಭಟನೆ ನಡೆಸಿದ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕೆ.ರಾಂಪುರ ಗ್ರಾಮದಲ್ಲಿ ನಡೆದಿದೆ. ಇದು ತುಮಕೂರು ಮತ್ತು ರಾಯದುರ್ಗ ನಡುವಿನ ಯೋಜನೆ. ಈಗಾಗಲೇ ಆಂಧ್ರದ ಕಲ್ಯಾಣ ದುರ್ಗದಿಂದ ತುಮಕೂರಿನ ಗಡಿ ಭಾಗದವರೆಗೂ ರೈಲು ಓಡಾಟ ಶುರುವಾಗಿದೆ. ಉಳಿದಂತೆ ತುಮಕೂರಿನವರೆಗೂ ರೈಲ್ವೆ ಹಳಿ ಹಾಕುವ ಕಾಮಗಾರಿ ನಡೆಯುತ್ತಿದೆ. 2 ವರ್ಷದ ಹಿಂದೆ ಕೆ.ರಾಂಪುರ ಬಳಿ ಹಳಿಯನ್ನು ಹಾಕಲಾಗಿದೆ.

ಗ್ರಾಮದ ಬಳಿ ಬ್ರಿಡ್ಜ್ ನಿರ್ಮಿಸದೆ ಹಳಿ ಹಾಕಿರುವುದರಿಂದ ರೈತರು ತಮ್ಮ ಹೊಲಗಳಿಗೆ ಹೋಗಲು ಪರದಾಡುವಂತಾಗಿದೆ. ಜಾನುವಾರುಗಳ ಓಡಾಟಕ್ಕೂ ಇದರಿಂದ ಸಮಸ್ಯೆಯಾಗುತ್ತಿದೆ. ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಬ್ರಿಡ್ಜ್ ನಿರ್ಮಾಣಕ್ಕೆ ಅವಕಾಶವಿದೆ. ಒಂದು ಬಾರಿ ರೈಲು ಓಡಾಟ ಶುರುವಾದರೆ ಬ್ರಿಡ್ಜ್ ನಿರ್ಮಾಣ ಅಸಾಧ್ಯ. ಹೀಗಾಗಿ ಈಗಲೇ ಬ್ರಿಡ್ಜ್ ನಿರ್ಮಿಸಿಕೊಡಿ ಎಂದು ಕೆ.ರಾಂಪುರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Last Updated : Feb 3, 2023, 8:39 PM IST

ABOUT THE AUTHOR

...view details