ಕರ್ನಾಟಕ

karnataka

ETV Bharat / videos

ಕತ್ತೆಗಳಿಗೆ ಶಾಸ್ತ್ರೋಕ್ತ ಮದುವೆ ಮಾಡಿ ಅಥಣಿ ಜನರಿಂದ ಮಳೆರಾಯನಿಗೆ ವಿಶೇಷ ಪ್ರಾರ್ಥನೆ- ವಿಡಿಯೋ - etv abharat kannada

🎬 Watch Now: Feature Video

ಮಳೆಗಾಗಿ ಕತ್ತೆಗಳ ಮದುವೆ ಮಾಡಿದ ಗ್ರಾಮಸ್ಥರು!

By

Published : Jun 9, 2023, 10:53 PM IST

ಚಿಕ್ಕೋಡಿ(ಬೆಳಗಾವಿ): ವಾಡಿಕೆಯಂತೆ ಜೂನ್ ಮೊದಲ ವಾರದಲ್ಲಿ ಕರ್ನಾಟಕಕ್ಕೆ ಮಾನ್ಸೂನ್ ಆಗಮಿಸಬೇಕಿತ್ತು. ಆದರೆ ಹಲವು ದಿನ ಕಳೆದರೂ ಮಳೆಯಾಗದೇ ಇರುವುದು ರೈತರಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ಗ್ರಾಮದ ಹಿರಿಯರು ಕತ್ತೆಗಳ ಮೊರೆ ಹೋಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಊರಿನಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಕತ್ತೆಗಳಿಗೆ ಮದುವೆ ಮಾಡಿಸಿ ವರುಣನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮನುಷ್ಯರ ಮದುವೆಯಂತೆಯೇ ಕತ್ತೆಗಳಿಗೂ ಮದುವೆ ಮಾಡಲಾಗುತ್ತದೆ. ಇಲ್ಲಿ ಹೆಣ್ಣು ಮತ್ತು ಗಂಡಿನ ಕಡೆಯ ಎರಡೂ ಕುಟುಂಬದವರು ಇರುತ್ತಾರೆ. ಇವರೆಲ್ಲರೂ ಸೇರಿ ಶಾಸ್ತ್ರೋಕ್ತವಾಗಿ ಎರಡು ಕತ್ತೆಗಳ ಮದುವೆ ಮಾಡುತ್ತಾರೆ. ಮೊದಲಿಗೆ ಕತ್ತೆಗಳಿಗೆ ಸ್ನಾನ ಮಾಡಿಸಿ ಅವುಗಳಿಗೆ ಬಾಸಿಂಗ ಕಟ್ಟಿ, ಹೂಮಾಲೆ ಹಾಕಲಾಗುತ್ತದೆ. ಮಂಗಳವಾದ್ಯಗಳನ್ನು ನುಡಿಸುತ್ತಾರೆ. ನಂತರ ಗ್ರಾಮದ ಅರ್ಚಕರಿಂದ ಮಂತ್ರ ಪಠಣೆ ನಡೆಯುತ್ತದೆ. ಅಕ್ಷತೆ ಹಾಕಿ ಗ್ರಾಮಸ್ಥರು ಕತ್ತೆಗಳ ಮದುವೆ ಮಾಡುತ್ತಾರೆ. ನಂತರ ಮದುವೆ ಊಟ ಸವಿದು ಮಳೆಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. 

ಗ್ರಾಮ ಮುಖಂಡ ತುಕಾರಾಮ್ ಸೇಕಳೆ ಮಾತನಾಡಿ, "ಉತ್ತರ ಕರ್ನಾಟಕ ಭಾಗದಲ್ಲಿ ಕತ್ತೆಗಳ ಮದುವೆ ಮಾಡುವುದು ವಿಶೇಷವೇನಲ್ಲ. ಮಳೆ ಆಗದೇ ಇದ್ದಾಗ ನಾವು ಇಂತಹ ಸಂಪ್ರದಾಯಗಳನ್ನು ಮಾಡಿಕೊಂಡು ಬರುತ್ತೇವೆ. ನಾನು ಚಿಕ್ಕವನಿದ್ದಾಗಲೂ ನಮ್ಮ ಹಿರಿಯರು ಇಂತಹ ಆಚರಣೆ ಮಾಡಿಕೊಂಡಿದ್ದು ಮಳೆ ಆಗಿರುವ ನಿದರ್ಶನಗಳಿವೆ. ಇದರಿಂದ ನಾವು ಇವತ್ತು ಗ್ರಾಮದೇವತೆಯ ಸ್ಥಳದಲ್ಲಿ ಮದುವೆ ಕಾರ್ಯ ಮಾಡಿದ್ದೇವೆ. ಮದುವೆಯಾಗಿ ಏಳು ದಿನದಲ್ಲಿ ಮಳೆ ಆಗುತ್ತದೆ ಎಂದು ನಮಗೆ ಸಂಪೂರ್ಣ ನಂಬಿಕೆ ಇದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಮಳೆಗಾಗಿ ಪ್ರಾರ್ಥಿಸಿ ಕುದ್ರೋಳಿ ಗೋಕರ್ಣನಿಗೆ ಕಾಂಗ್ರೆಸ್‌ನಿಂದ ಶತ ಸೀಯಾಳಾಭಿಷೇಕ

ABOUT THE AUTHOR

...view details