ವಿಜಯಪುರ: ಸರಳವಾಗಿ ಆರಂಭಗೊಂಡ ವಿಜಯಪುರ ಸಿದ್ದೇಶ್ವರ ಜಾತ್ರೆ.. - ನಂದಿ ಧ್ವಜಗಳ ಉತ್ಸವ
ವಿಜಯಪುರ:ಜಿಲ್ಲೆಯ ಆರಾಧ್ಯದೈವ ಶ್ರೀ ಸಿದ್ದೇಶ್ವರ ದೇವರ ಜಾತ್ರೆ ಗುರುವಾರದಿಂದ ಸರಳ ಹಾಗೂ ಧಾರ್ಮಿಕ ಪೂಜೆಗಳ ಮೂಲಕ ಆರಂಭಗೊಂಡಿದೆ. ಇಂದು ಮಧ್ಯಾಹ್ನ ಶ್ರೀ ಸಿದ್ದೇಶ್ವರ ಶ್ರೀ ದೇವಸ್ಥಾನದಿಂದ ಅಟಲ್ ಬಿಹಾರಿ ವಾಜಪೇಯಿ ರಸ್ತೆ ಮೂಲಕ ಪ್ರಮುಖ ರಸ್ತೆಯಲ್ಲಿ ನಂದಿ ಧ್ವಜಗಳ ಉತ್ಸವದ ಮೆರವಣಿಗೆ ಯಾವುದೇ ಆಡಂಬರವಿಲ್ಲದೇ ನಡೆಯಿತು. ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದ ಕಾರಣ ಈ ಬಾರಿ ಸಂಕ್ರಮಣದ ಸಿದ್ದೇಶ್ವರ ಜಾತ್ರೆಯನ್ನು ಸರಳವಾಗಿ ಆಚರಿಸಲು ಸಿದ್ದೇಶ್ವರ ಸಂಸ್ಥೆ ನಿರ್ಧಾರಿಸಿದೆ. ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ನಿನ್ನೆ ಗೋವು ಪೂಜೆ ಮಾಡುವ ಮೂಲಕ ಜಾತ್ರೆಗೆ ಸರಳವಾಗಿ ಚಾಲನೆ ನೀಡಲಾಗಿತ್ತು.
ಇದನ್ನೂ ಓದಿ:ಸಿದ್ದರಾಮಯ್ಯ ರಾಜಕೀಯ ಭವಿಷ್ಯ ನುಡಿದ ಮನೆ ದೇವರು: 2 ಕ್ಷೇತ್ರದಲ್ಲಿ ನಿಲ್ಲುವಂತೆ ದೇವಿ ಸೂಚನೆ