Watch video.. ವಿಜಯಪುರ: ಬಾಯಿಗೆ ಹಗ್ಗ ಕಟ್ಟಿದ ಸ್ಥಿತಿಯಲ್ಲಿ ಮೊಸಳೆ ಪತ್ತೆ..
ವಿಜಯಪುರ :ಜಿಲ್ಲೆಯ ಕೊಲ್ಹಾರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಕೃಷ್ಣಾನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿದ ಸೇತುವೆ ಬಳಿ ಬಾಯಿಗೆ ಹಗ್ಗ ಕಟ್ಟಿರುವ ಸ್ಥಿತಿಯಲ್ಲಿ ಮೊಸಳೆ ಕಾಣಿಸಿಕೊಂಡಿದೆ. ಮೊಸಳೆಯು ಜನವಸತಿ ಪ್ರದೇಶಕ್ಕೆ ನುಗ್ಗಿದ ಹಿನ್ನೆಲೆಯಲ್ಲಿ ಹಗ್ಗ ಕಟ್ಟಿ ಸೆರೆ ಹಿಡಿಯುವ ವೇಳೆ ತಪ್ಪಿಸಿಕೊಂಡು ನದಿಗೆ ಇಳಿದಿರುವ ಶಂಕೆ ವ್ಯಕ್ತವಾಗಿದೆ. ಮೊಸಳೆ ಬಾಯಿಗೆ ಹಗ್ಗದಿಂದ ಕಟ್ಟಿ ಬೇರೆಡೆಯಿಂದ ತಂದು ಬಿಟ್ಟಿರಬಹುದಾಗಿದೆ ಎಂದೂ ಹೇಳಲಾಗುತ್ತಿದೆ.
ಮೊಸಳೆ ಬಾಯಿಗೆ ಹಗ್ಗ ಕಟ್ಟಿರುವ ಕಾರಣ ಆಹಾರ ಸೇವಿಸಲು ಆಗದೇ ನದಿಯಿಂದ ಹೊರಕ್ಕೆ ಬಂದಿರುವ ಸಾಧ್ಯತೆ ಇದೆ. ಘಟನೆ ಬಗ್ಗೆ ತಿಳಿದು ಸ್ಥಳಕ್ಕೆ ಆಗಮಿಸಿದ ಕೊಲ್ಹಾರ ಪೊಲೀಸರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು. ಅಧಿಕಾರಿಗಳು ಬಂದ ಮೇಲೆ ಮೊಸಳೆ ಬಾಯಿಗೆ ಕಟ್ಟಿದ ಹಗ್ಗವನ್ನು ಬಿಡಿಸಿ ನದಿಗೆ ಬಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಮೊಸಳೆಯನ್ನು ನೋಡಲು ಸಾರ್ವಜನಿಕರು ಮತ್ತು ವಾಹನ ಸವಾರರು ಸ್ಥಳದಲ್ಲೇ ಬೀಡು ಬಿಟ್ಟಿದ್ದರು.
ಇದನ್ನೂ ಓದಿ :ರಸ್ತೆ ಅಪಘಾತ: ಜೀವನ್ಮರಣದ ಹೋರಾಟ ನಡೆಸುತ್ತಿದ್ದವರ ರಕ್ಷಿಸಿದ ಶಾಸಕ ದೇವಾನಂದ ಚೌಹಾಣ್