Video: ಕೈ ಸನ್ನೆ ಮಾಡಿದರೂ ಬಸ್ ನಿಲ್ಲಿಸದ ಚಾಲಕನಿಗೆ ಮಂಗಳಮುಖಿಯರಿಂದ ತರಾಟೆ
ಚಿಕ್ಕೋಡಿ: ನಡು ರಸ್ತೆಯಲ್ಲಿ ಸರ್ಕಾರಿ ಬಸ್ವೊಂದನ್ನು ತಡೆದ ಮಂಗಳಮುಖಿಯರು ಚಾಲಕನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರುಗೇರಿ ಪಟ್ಟಣದಲ್ಲಿ ಶನಿವಾರ ನಡೆಯಿತು. ನಿಲ್ದಾಣದಲ್ಲಿ ಕೈ ಮಾಡಿದರೂ ಬಸ್ ನಿಲ್ಲಿಸದ ಹಿನ್ನೆಲೆಯಲ್ಲಿ ಕೋಪಗೊಂಡ ಮಂಗಳಮುಖಿಯರು ಮುಂದಿನ ಸ್ಟಾಪ್ನಲ್ಲಿ ಬಸ್ ಅಡ್ಡಗಟ್ಟಿ ಚಾಲಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. "ನಾವು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿದ್ದೇವೆ, ನಾವೂ ಕೂಡ ಮನುಷ್ಯರೇ, ನಮ್ಮನ್ನು ಕಡೆಗಣಿಸಿರುವುದು ಖಂಡನೀಯ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ಘೋಷಿಸಿದೆ. ಅದರಲ್ಲಿ ಒಂದಾದ ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಹಿನ್ನೆಲೆಯಲ್ಲಿ ಸರ್ಕಾರಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ದ್ವಿಗುಣವಾಗಿದೆ. ಇದರಿಂದ ಕೆಲ ಚಾಲಕರು ಅನೇಕ ಕಡೆಗಳಲ್ಲಿ ಬಸ್ ನಿಲ್ಲಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ :ವಸಾಹತುಶಾಹಿ ಆಡಳಿತ ದೂರವಾಯ್ತು.. ಬದಲಾದ ಬದುಕು.. ತೃತೀಯ ಲಿಂಗಿಗಳ ಕಡೆಗಣನೆ ಸಾಕು..