ಕರ್ನಾಟಕ

karnataka

ರೀಲ್ಸ್​ಗಾಗಿ ಕಾರಿನ ಮೇಲೆ ಕುಳಿತುಕೊಂಡ ಯುವಕ

ETV Bharat / videos

ರೀಲ್ಸ್​ಗಾಗಿ ಕಾರಿನ ಮೇಲೆ ಕುಳಿತುಕೊಂಡು ಯುವಕನಿಂದ ಹುಚ್ಚಾಟ: ಆರೋಪಿಗಾಗಿ ಪೊಲೀಸರ ಶೋಧ - ವಿಡಿಯೋ - ​ ETV Bharat Karnataka

By ETV Bharat Karnataka Team

Published : Dec 19, 2023, 9:04 PM IST

ಗುರುಗ್ರಾಮ (ಹರಿಯಾಣ) :ಇಂದಿನ ಯುವ ಪೀಳಿಗೆ ರೀಲ್ಸ್​ ಮಾಡುವುದರಲ್ಲಿ ಮತ್ತು ನೋಡುವುದರಲ್ಲಿ ತಮ್ಮ ಸಮಯವನ್ನು ವ್ಯಯ ಮಾಡುತ್ತಿದ್ದು, ಕೆಲವು ಸಂದರ್ಭದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಪಣಕ್ಕಿಟ್ಟಿರುವ ಸಾಕಷ್ಟು ಉದಾಹರಣೆಗಳಿವೆ. ಇದಕ್ಕೆ ಸೂಕ್ತವಾದ ಮತ್ತೊಂದು ನಿದರ್ಶನ ಎಂಬಂತೆ ಹರಿಯಾಣದ ಗುರುಗ್ರಾಮದಲ್ಲಿ ಯುವಕನೊಬ್ಬ ಚಲಿಸುತ್ತಿರುವ ಕಾರಿನ ಮೇಲೆ ಕುಳಿತು ಮದ್ಯದ ಬಾಟಲಿ ಬೀಸುತ್ತಾ ವಿಡಿಯೋ ಮಾಡಿದ್ದಾನೆ. 

ಈ ಹುಚ್ಚಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಸೋಮವಾರ ಸಖತ್​ ವೈರಲ್​ ಆಗಿದೆ. ವಿಡಿಯೋದಲ್ಲಿ ಕಾಣುವಂತೆ ಕಾರಿನ ಮೇಲೆ ಕುಳಿತಿರುವ ಯುವಕ ಸ್ವಲ್ಪ ಬ್ಯಾಲೆನ್ಸ್ ಕಳೆದುಕೊಂಡಿದ್ದರೆ ನೇರವಾಗಿ ರಸ್ತೆಯಲ್ಲೇ ಬೀಳುತ್ತಿದ್ದ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಆದರೆ ಯಾವುದೇ ಭಯವಿಲ್ಲದೇ ಪುಂಡಾಟ ಪ್ರದರ್ಶನ ಮಾಡಿರುವ ಯುವಕ ಮುಖಕ್ಕೆ ಮಾಸ್ಕ್ ಹಾಕಿಕೊಂಡಿರುವುದರಿಂದ ಗುರುತು ಪತ್ತೆಯಾಗಿಲ್ಲ. 

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾರಿನ ನಂಬರ್ ಗುರುಗ್ರಾಮದ್ದು ಎಂಬುದು ತಿಳಿದು ಬಂದಿದೆ. ಕಾರಿನ ನೋಂದಣಿಯಿಂದ ಸಂಪೂರ್ಣ ಮಾಹಿತಿ ಪಡೆದು ಆರೋಪಿಯನ್ನು ಗುರುತಿಸಿ ಶೀಘ್ರವೇ ಬಂಧಿಸಲಾಗುವುದು. ಈ ರೀತಿ ಸ್ಟಂಟ್ಸ್ ಮಾಡುವುದು ಕಾನೂನು ಬಾಹಿರವಾಗಿದೆ ಎಂದು ಎಸಿಪಿ ವರುಣ್ ದಹಿಯಾ ಹೇಳಿದ್ದಾರೆ.  

ಇದನ್ನೂ ಓದಿ :ಪಿಎಸ್ಐ ಕಾರು ಪಲ್ಟಿ, ಪ್ರಾಣಾಪಾಯದಿಂದ ಪಾರು: ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ABOUT THE AUTHOR

...view details