ಮದುವೆ ಸಮಾರಂಭದಲ್ಲಿ ಮಾಫಿಯಾ ಅತೀಕ್ ಅಹ್ಮದ್ ಪುತ್ರ ಗುಂಡು ಹಾರಿಸುವ ಹಳೇ ವಿಡಿಯೋ ವೈರಲ್
ಪ್ರಯಾಗರಾಜ್ (ಉತ್ತರಪ್ರದೇಶ) :ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿ ಗ್ಯಾಂಗ್ ಸ್ಟರ್, ರಾಜಕಾರಣಿ ಅತೀಕ್ ಅಹ್ಮದ್, ಪುತ್ರ ಅಸದ್ ಅಹ್ಮದ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅಸದ್ ಅಹ್ಮದ್ ಮದುವೆ ಸಮಾರಂಭದಲ್ಲಿ ಸಂತೋಷದಿಂದ ಆಕಾಶಕ್ಕೆ ಗುಂಡು ಹಾರಿಸುತ್ತಿರುವುದನ್ನು ಕಾಣಬಹುದು. ಪಿಸ್ತೂಲಿನಿಂದ ನಿರಂತರವಾಗಿ ಹಲವಾರು ಸುತ್ತು ಗುಂಡು ಹಾರಿಸಿದ ಅಸದ್ ಅಹ್ಮದ್, ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿಯಾಗಿದ್ದು, ಘಟನೆ ನಡೆದ ಬಳಿಕ ತಲೆಮರೆಸಿಕೊಂಡಿದ್ದಾನೆ. ಕೆಲವರು ಗುಂಡು ಹಾರಿಸಿದವನು ಅತಿಕ್ ಅವರ ಎರಡನೇ ಮಗ ಅಲಿ ಎನ್ನುತ್ತಿದ್ದಾರೆ.
ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಸುಮಾರು ಏಳು ವರ್ಷಗಳಷ್ಟು ಹಳೆಯದು ಎನ್ನಲಾಗಿದ್ದು, ಇದರಲ್ಲಿ ಅಸದ್ ಅಹ್ಮದ್, ಪಿಸ್ತೂಲಿನಿಂದ ಹಲವಾರು ಸುತ್ತು ಗುಂಡು ಹಾರಿಸಿದ ನಂತರ, ಅತೀಕ್ ಅಹ್ಮದ್ ಗುಂಡು ಹಾರಿಸುವುದನ್ನು ನಿಲ್ಲಿಸಲು ಹೇಳಿದ್ದಾನೆ. ಈ ವಿಡಿಯೋ ಉಮೇಶ್ ಪಾಲ್ ಅವರ ಹತ್ಯೆಯ ನಡೆಯುವ ಹಿಂದೆಯೇ ಭಾರಿ ಸದ್ದು ಮಾಡಿತ್ತು. ಆದರೇ ಇದೀಗಾ ಹತ್ಯೆ ನಡೆದ ಬಳಿಕ ಮತ್ತೆ ವಿಡಿಯೋ ವೈರಲ್ ಆಗಿದ್ದು, ಅತೀಕ್ ಅವರ ಮಕ್ಕಳು ಬಾಲ್ಯದಿಂದಲೂ ಗುಂಡು ಹಾರಿಸುವುದನ್ನು ಕಲಿತಿದ್ದರು. ಇದೀಗಾ ಉಮೇಶ್ ಪಾಲ್ ಅವರ ಹತ್ಯೆ ಸಂದರ್ಭದಲ್ಲಿ ಗುಂಡುಹಾರಿಸುವುದನ್ನು ಅತೀಕ್ ಅಹ್ಮದ್ ಮಕ್ಕಳು ಪ್ರದರ್ಶಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ :ಉಮೇಶ್ ಪಾಲ್ ಹತ್ಯೆ ಪ್ರಕರಣ: ಪತ್ರಕರ್ತ ಜಾಫರ್ ಅಹ್ಮದ್ ಮನೆ ಧ್ವಂಸ - ವಿಡಿಯೋ ಹೇಳಿಕೆ ಬಿಡುಗಡೆ