ನೋಡ ನೋಡುತ್ತಿದ್ದಂತೆ ಯುವತಿಯ ಅಪಹರಣ: ನೆರವಿಗೆ ಧಾವಿಸದ ಜನ- ವಿಡಿಯೋ - ಅಪಹರಣ ವಿಡಿಯೋ
By PTI
Published : Nov 21, 2023, 10:57 AM IST
ಗ್ವಾಲಿಯರ್(ಮಧ್ಯಪ್ರದೇಶ): ಹಾಡಹಗಲೇ ಸಾರ್ವಜನಿಕರ ಮುಂದೆ ಯುವತಿಯನ್ನು ಇಬ್ಬರು ಯುವಕರು ಬೈಕ್‌ನಲ್ಲಿ ಬಲವಂತವಾಗಿ ಕೂರಿಸಿಕೊಂಡು ಅಪಹರಿಸಿರುವ ಘಟನೆ ಗ್ವಾಲಿಯರ್‌ನಲ್ಲಿ ನಡೆದಿದೆ. ಅಪಹರಣದ ದೃಶ್ಯ ಘಟನಾ ಸ್ಥಳದ ಸಮೀಪ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೋಮವಾರ ಘಟನೆ ನಡೆದಿದೆ. ಪೊಲೀಸರು ಯುವತಿಯ ರಕ್ಷಣೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಸಿಂಗ್ ಚಂದೇಲ್ ಪ್ರತಿಕ್ರಿಯಿಸಿ, "ಝಾನ್ಸಿ ರಸ್ತೆ ಪ್ರದೇಶದಲ್ಲಿ ಸೋಮವಾರ ಅಪಹರಣ ನಡೆದಿದೆ. ಪೋಷಕರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ್ದೇವೆ. ಯುವತಿಯ ಪತ್ತೆಗೆ ಪ್ರಯತ್ನ ನಡೆಯುತ್ತಿದೆ. ಸಂಬಂಧಿಕರ ಪ್ರಕಾರ, ಯುವತಿಯ ಗ್ರಾಮದ ಕೆಲ ಯುವಕರು ಆಕೆಗೆ ಕಿರುಕುಳ ನೀಡುತ್ತಿದ್ದರು. ಈಗಾಗಲೇ ಆ ಸಂಬಂಧ ಕೂಡಾ ಪ್ರಕರಣ ದಾಖಲಾಗಿದೆ" ಎಂದು ತಿಳಿಸಿದ್ದಾರೆ.
ಸಂತ್ರಸ್ತ ಯುವತಿ ತನ್ನ ತಂದೆ ಮತ್ತು ಕುಟುಂಬ ಸದಸ್ಯರೊಂದಿಗೆ ಭಿಂಡ್‌ನಿಂದ ಗ್ವಾಲಿಯರ್‌ಗೆ ಹೋಗುತ್ತಿದ್ದರು. ಸಂಬಂಧಿಕರ ಮನೆಯಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಬೇಕಿತ್ತು. ಈ ವೇಳೆ ಝಾನ್ಸಿ ರಸ್ತೆ ಪ್ರದೇಶದಲ್ಲಿ ಆಕೆ ಮತ್ತು ಸಂಬಂಧಿಕರು ನಾಕಾ ಚಂದ್ರವದ್ನಿ ಎಂಬಲ್ಲಿ ಮಾತನಾಡುತ್ತಾ ನಿಂತಿದ್ದರು. ತಕ್ಷಣ ಬೈಕ್‌ನಲ್ಲಿ ಬಂದ ಯುವಕರು ಯುವತಿಯನ್ನು ಬಲವಂತವಾಗಿ ಬೈಕ್‌ನಲ್ಲಿ ಕೂರಿಸಿ ಕರೆದೊಯ್ದರು ಎಂದು ಸಂಬಂಧಿಕರು ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:10 ದಿನದಿಂದ ಉತ್ತರಕಾಶಿ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ಮೊದಲ ದೃಶ್ಯ