ಕರ್ನಾಟಕ

karnataka

ಶಾಸಕನ ಸಹೋದರ ಮೇಲೆ ಹಲ್ಲೆ

ETV Bharat / videos

ಮತದಾನದಂದು ಕೈ, ಕಮಲ ಕಾರ್ಯಕರ್ತರ ಕಿತ್ತಾಟ; ಶಾಸಕರ ಸಹೋದರನ ಮೇಲೆ ಹಲ್ಲೆ- ವಿಡಿಯೋ - ಕರ್ನಾಟಕ ಚುನಾವಣೆ 2023

By

Published : May 11, 2023, 1:31 PM IST

ರಾಯಚೂರು: ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಯಾಗಿದ್ದು, ಶಾಸಕ ಸಹೋದರನ ಮೇಲೆ ಹಲ್ಲೆ ನಡೆದಿರುವ ವಿಡಿಯೋ ವೈರಲ್ ಆಗಿದೆ. ಮಸ್ಕಿ ಕ್ಷೇತ್ರದ ಶಾಸಕ ಆರ್.ಬಸವನಗೌಡ ತುರುವಿಹಾಳ ಸಹೋದರ ಸಿದ್ದನಗೌಡನ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ನಡೆದಿರುವ ಆರೋಪ ಕೇಳಿ ಬಂದಿದೆ.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪ ಬುಧವಾರ ಸಂಜೆ ಆರ್.ಬಸವನಗೌಡ ತುರುವಿಹಾಳ ಸಹೋದರ ಸಿದ್ದನಗೌಡ ಮೇಲೆ ಬಿಜೆಪಿ ಕಾರ್ಯಕರ್ತ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಧ್ಯಾಹ್ನದ ವೇಳೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಇದರಿಂದಾಗಿ ಸಿದ್ದನಗೌಡ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಮುಖಾಮುಖಿಯಾದ ಸಮಯದಲ್ಲಿ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ. 

ಸ್ಥಳದಲ್ಲಿ ಹಲವರು ಸಿದ್ದನಗೌಡರನ್ನು ಗಚ್ಚಿನಮಠದಲ್ಲಿನ ಸುರಕ್ಷಿತವಾಗಿ ಸ್ಥಳಕ್ಕೆ ಕಳುಹಿಸಿದ್ದು ಆಗಬಹುದಾದ ಅನಾಹುತ ತಪ್ಪಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿ ಜನರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದು, ಸಿದ್ದನಗೌಡರನ್ನು ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಶಾಂತಿಯುತ ಮತದಾನ: ಕರ್ನಾಟಕದ ಜನತೆಗೆ ಕೃತಜ್ಞತೆ ಹೇಳಿದ ಎಡಿಜಿಪಿ ಅಲೋಕ್ ಕುಮಾರ್

ABOUT THE AUTHOR

...view details