ಬೈಕ್ನಲ್ಲಿ ಚಲಿಸುತ್ತಿರುವಾಗಲೇ ಟಿಪ್ಪರ್ ಚಕ್ರಕ್ಕೆ ಸಿಲುಕಿದ ವ್ಯಕ್ತಿ.. 2 ಕಾಲುಗಳಿಗೂ ಗಂಭೀರ ಗಾಯ - ವಿಡಿಯೋ - ಆನೇಕಲ್
Published : Oct 14, 2023, 9:55 AM IST
ಆನೇಕಲ್ :ಸರ್ಜಾಪುರ ಅಬ್ಬಯ್ಯ ವೃತ್ತದಲ್ಲಿ ಟಿವಿಎಸ್ ಎಕ್ಸೆಲ್ನಲ್ಲಿ ಸಾಗುತ್ತಿದ್ದ ವ್ಯಕ್ತಿ ಪಕ್ಕದಲ್ಲೇ ಸಾಗುತ್ತಿದ್ದ ಟಿಪ್ಪರ್ ಕೆಳಗೆ ಬಿದ್ದಿದ್ದು ಆತನ ಕಾಲಿನ ಮೇಲೆ ಟಿಪ್ಪರ್ ಚಕ್ರ ಹರಿದಿದೆ. ಪರಿಣಾಮ ವ್ಯಕ್ತಿಯ 2 ಕಾಲುಗಳಿಗೆ ತೀವ್ರ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮಿಳುನಾಡಿನ ಹೊಸೂರು ಬಳಿಯ ಸೇವಗಾನಪಲ್ಲಿಯ 65 ವರ್ಷದ ನಾರಾಯಣರೆಡ್ಡಿ ಗಾಯಗೊಂಡ ವ್ಯಕ್ತಿ ಎನ್ನಲಾಗಿದ್ದು, ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. ಸರ್ಜಾಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಟಿವಿಎಸ್ ಎಕ್ಸೆಲ್ ಮೇಲೆ ಬರುತ್ತಿದ್ದ ವ್ಯಕ್ತಿ ಟಿಪ್ಪರ್ನ ಎಡಭಾಗದಲ್ಲಿ ಬಂದಿದ್ದು ಈ ವೇಳೆ ಬೈಕ್ ಸ್ವಲ್ಪ ನಿಯಂತ್ರಣ ತಪ್ಪಿದ್ದನ್ನು ಗಮನಿಸಬಹುದು. ಪರಿಣಾಮ ಬೈಕ್ ಸಮೇತ ಸವಾರ ಟಿಪ್ಪರ್ನ ಕೆಳಗೆ ಬಿದ್ದಿದ್ದಾನೆ. ಟಿಪ್ಪರ್ ಚಲಿಸುತ್ತಿದ್ದ ಕಾರಣ 3 ಸೆಕೆಂಡ್ಗಳಷ್ಟು ಟಿಪ್ಪರ್ ವಾಹನ ಆತನ ಕಾಲಿನ ಮೇಲೆ ಹೋಗಿದೆ. ತಕ್ಷಣವೇ ಟಿಪ್ಪರ್ ಚಾಲಕ ವಾಹನ ನಿಲ್ಲಿಸಿದ್ದಾನೆ. ಘಟನೆ ನಡೆದ ಕೂಡಲೇ ಅಲ್ಲಿ ಇದ್ದದಂತಹ ಸ್ಥಳೀಯರು ವ್ಯಕ್ತಿಯ ರಕ್ಷಣೆಗೆ ಧಾವಿಸಿದ್ದು, ಆತನನ್ನು ಚಕ್ರದಿಂದ ಹೊರತೆಗದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಗಂಭೀರ ಗಾಯಗಳನ್ನು ಬಿಟ್ಟರೆ ಪ್ರಾಣಹಾನಿಯಾಗಿಲ್ಲ.
ಇದನ್ನೂ ಓದಿ:ಸರಣಿ ಅಪಘಾತ.. ಸಂಪೂರ್ಣ ನಜ್ಜುಗುಜ್ಜಾದ ಕಾರು.. ಅದೃಷ್ಟವಶಾತ್ ಪಾರಾದ ಚಾಲಕ: CCTV Video