ಶಿಕ್ಷಕಿಯ ಸ್ಕೂಟಿಯಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟ ಹಕ್ಕಿ: ವಿಡಿಯೋ ನೋಡಿ - ದಾವಣಗೆರ
ದಾವಣಗೆರೆ : ಹಕ್ಕಿಗಳು ಸಾಮಾನ್ಯವಾಗಿ ಗಿಡ- ಮರ, ಮನೆ ಸೇರಿದಂತೆ ಇತರೆ ಸುರಕ್ಷತೆ ಇರುವ ಪ್ರದೇಶದಲ್ಲಿ ಗೂಡುಗಳನ್ನು ಕಟ್ಟುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಪಕ್ಷಿ ಗೂಡು ಕಟ್ಟಲು ವಿಶೇಷವಾದ ಸ್ಥಳ ಹುಡುಕಿದೆ. ಹೊನ್ನಾಳಿ ಪಟ್ಟಣದ ಅನಿತಾ ಯೋಗೀಶ್ ಎಂಬ ಶಾಲಾ ಶಿಕ್ಷಕಿಯ ದ್ವಿಚಕ್ರ ವಾಹನದ (ಸ್ಕೂಟಿ) ಹ್ಯಾಂಡಲ್ ಕೆಳಗೆ ಇರುವ ಖಾಲಿ ಜಾಗದಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟಿದೆ. ಅಪರೂಪದ ಘಟನೆ ಸಾಕಷ್ಟು ಕುತೂಹಲಕ್ಕೆ ಕಾರಣವಾಯಿತು.
ಮಕ್ಕಳನ್ನು ಶಾಲೆಗೆ ಬಿಡಲು ಶಿಕ್ಷಕಿ ತಮ್ಮ ಸ್ಕೂಟಿ ತೆಗೆದಾಗ ಪಕ್ಷಿ ಗೂಡು ಕಟ್ಟಿರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ. ಇದೇ ವೇಳೆ ಸ್ಥಳೀಯರು ಕೂಡ ವಿಷಯ ತಿಳಿದು ಮನೆಗೆ ಬಂದು ಕುತೂಹಲದ ಕಣ್ಣುಗಳಿಂದ ನೋಡಿ ಬೆರಗಾಗಿದ್ದಾರೆ. ಸುರಕ್ಷಿತ ಸ್ಥಳಕ್ಕೆ ಗೂಡು ಮತ್ತು ಮೊಟ್ಟೆಯನ್ನು ಸ್ಥಳಾಂತರಿಸಲಾಗಿದೆ. ಆದರೆ ಗೂಡಿನ ಸುತ್ತಮುತ್ತ ಎಲ್ಲೂ ಪಕ್ಷಿ ಮಾತ್ರ ಕಂಡು ಬರಲೇ ಇಲ್ಲ. ಅಪರೂಪದ ಘಟನೆ ಕಂಡು ಶಿಕ್ಷಕಿಯ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :ಕಾರವಾರದ ಕಡಲ ತೀರದಲ್ಲಿ ಕಡಲಾಮೆಯ 211 ಮೊಟ್ಟೆ ಪತ್ತೆ