ಕರ್ನಾಟಕ

karnataka

ಮಾಜಿಸಚಿವ ಶಿವರಾಜ ತಂಗಡಗಿಯನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ಕಾರ್ಯಕರ್ತರ

ETV Bharat / videos

ಮಾಜಿ ಸಚಿವರಿಗೆ ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ಕಾರ್ಯಕರ್ತರು.. ವಿಡಿಯೋ ವೈರಲ್​ - ETV Bharath Kannada news

By

Published : Feb 4, 2023, 9:19 PM IST

Updated : Feb 6, 2023, 4:07 PM IST

ಗಂಗಾವತಿ(ಕೊಪ್ಪಳ):ಮಾಜಿ ಸಚಿವ ಹಾಗೂ ಹಾಲಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಅವರನ್ನು ಅವರದ್ದೇ ಪಕ್ಷದ ಕಾರ್ಯಕರ್ತನೊಬ್ಬ ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡಿರುವ  ಘಟನೆ ಕನಕಗಿರಿ ತಾಲೂಕಿನ ನಿರಲೂಟಿ ಗ್ರಾಮದಲ್ಲಿ ನಡೆದಿದೆ. ಮೀಸಲು ವಿಧಾನಸಭಾ ಕ್ಷೇತ್ರವಾಗಿರುವ ಕನಕಗಿರಿಯಲಿ ಈಗಾಗಲೆ ಸಾರ್ವತ್ರಿಕ ಚುನಾವಣೆಯ ಕಾವು ಏರತೊಡಗಿದ್ದು ಸಹಜವಾಗಿ ಆಯಾ ಪಕ್ಷದ ನಾಯಕರು, ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಶಿವರಾಜ ತಂಗಡಗಿ ನಿರಲೂಟಿ ಗ್ರಾಮಕ್ಕೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕಾರ್ಯಕರ್ತರೊಬ್ಬರು, ನೇರವಾಗಿ ಶಿವರಾಜ ತಂಗಡಗಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ವಿಚಲಿತವಾದ ತಂಗಡಗಿ ಸಾವರಿಸಿಕೊಂಡು ತನ್ನ ಕಾರ್ಯಕರ್ತನಿಗೆ ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಆದರೆ ತಂಗಡಗಿ ಮಾತುಗಳಿಗೆ ಸಮಾಧಾನವಾಗದ ಕಾರ್ಯಕರ್ತ, ನಮ್ಮ ಕಷ್ಟಕ್ಕೆ ಸ್ಪಂದಿಸದಿದ್ದಾಗ ನಿಮ್ಮನ್ನು ಏಕೆ ಬೆಂಬಲಿಸಬೇಕು ಎಂದು ಏಕವಚನದಲ್ಲಿಯೇ ತಂಗಡಗಿಯನ್ನು ಪ್ರಶ್ನಿಸಿದ್ದಾನೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

ಇದನ್ನೂ ಓದಿ:ಕಾಂಗ್ರೆಸ್ ಶಾಸಕ ಎಸ್ ರಾಮಪ್ಪಗೆ ಘೇರಾವ್​​​ ಹಾಕಿ ಧಿಕ್ಕಾರ ಕೂಗಿದ ಮಹಿಳೆಯರು.. ರಸ್ತೆ ಸರಿಪಡಿಸಿ, ಬಸ್ ಸೌಕರ್ಯ ಕಲ್ಪಿಸುವಂತೆ ಮನವಿ..

Last Updated : Feb 6, 2023, 4:07 PM IST

ABOUT THE AUTHOR

...view details