ಕರ್ನಾಟಕ

karnataka

ಹಾರ್ಮೋನಿಯಂ ನುಡಿಸಿ ಗಮನ ಸೆಳೆದ ಉಪ ರಾಷ್ಟ್ರಪತಿ ಜಗದೀಪ್ ಧನಕರ್

ETV Bharat / videos

ಹಾರ್ಮೋನಿಯಂ ನುಡಿಸಿ ಗಮನ ಸೆಳೆದ ಉಪ ರಾಷ್ಟ್ರಪತಿ ಜಗದೀಪ್ ಧನಕರ್! - ಬುಲ್ ಟೆಂಪಲ್ ರಸ್ತೆಯಲ್ಲಿರುವ ದೊಡ್ಡ ಗಣೇಶ ದೇವಸ್ಥಾನ

By

Published : Mar 1, 2023, 1:41 PM IST

ಬೆಂಗಳೂರು :ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಇಂದು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಿದರು. ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿರುವ ದೊಡ್ಡ ಗಣೇಶ ದೇವಸ್ಥಾನಕ್ಕೆ ಇಂದು ಬೆಳಗ್ಗೆ ದಂಪತಿ ಸಮೇತವಾಗಿ ಆಗಮಿಸಿದ ಉಪ ರಾಷ್ಟ್ರಪತಿ ಅವರನ್ನು ಡೋಲು, ನಾದಸ್ವರದ ಮೂಲಕ ಸ್ವಾಗತಿಸಲಾಯಿತು. ಈ ವೇಳೆ ಡೋಲು ಬಾರಿಸಿದ ಜಗದೀಪ್ ಧನಕರ್ ಅವರು ನಂತರ ಹಾರ್ಮೋನಿಯಂ ಪಡೆದು ನುಡಿಸಿ ಅಲ್ಲಿದ್ದ ಎಲ್ಲರ ಗಮನ ಸೆಳೆದರು.

ದೇವಾಲಯಕ್ಕೆ ತೆರಳಿದ್ದ ಉಪ ರಾಷ್ಟ್ರಪತಿಗಳು ಪೂಜೆ ಸಲ್ಲಿಸಿದರು. ನಂತರ ನಗರದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ತೆರಳಿದರು. ವಾಯುಪಡೆಯ ವಿಶೇಷ ವಿಮಾನದ ಮೂಲಕ ನಿನ್ನೆ ಸಂಜೆ ನಗರದ ಹೆಚ್​ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಉಪ ರಾಷ್ಟ್ರಪತಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. ರಾತ್ರಿ ಅವರು ರಾಜಭವನದಲ್ಲಿ ತಂಗಿದ್ದರು.

ಓದಿ:ಬೆಂಗಳೂರಿಗೆ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಭೇಟಿ: ಪರ್ಯಾಯ ಸಂಚಾರ ಮಾರ್ಗ ಬಳಸಲು ಸಾರ್ವಜನಿಕರಿಗೆ ಸೂಚನೆ 

ABOUT THE AUTHOR

...view details