ಮಂಡ್ಯ: ಧಾರಾಕಾರ ಮಳೆಗೆ ವಿಸಿ ನಾಲೆಯ ಸುರಂಗದ ಮೇಲ್ಭಾಗದ ಭೂಮಿ ಕುಸಿತ - ಈಟಿವಿ ಭಾರತ ಕರ್ನಾಟಕ
Published : Nov 7, 2023, 7:19 PM IST
|Updated : Nov 7, 2023, 8:00 PM IST
ಮಂಡ್ಯ: ನಗರದಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ವಿಶ್ವೇಶ್ವರಯ್ಯ ನಾಲಾ ಸುರಂಗದ ಮೇಲ್ಭಾಗದ ಭೂಮಿ ಕುಸಿದಿದೆ. ಮಂಡ್ಯ ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆಯಿಂದ ರೈತರಲ್ಲಿ ಆತಂಕ ಮನೆ ಮಾಡಿದೆ. ಗ್ರಾಮದ ಮಧ್ಯ ಭಾಗದಲ್ಲಿ ಸುರಂಗ ಹಾದು ಹೋಗಿದ್ದು, ಏಕಾಏಕಿ ನೂರು ಅಡಿ ಸುರಂಗ ಕುಸಿದಿದೆ.
ರಾಜಣ್ಣ ಎಂಬುವವರ ಮನೆಯ ಹಿಂದೆ ಸುರಂಗ ಕುಸಿದಿದೆ. ಏಕಾಏಕಿ ಸುರಂಗ ಕುಸಿದ ಹಿನ್ನೆಲೆ ಮನೆ ಗೋಡೆ ಸಹ ಕುಸಿತವಾಗಿದೆ. ಮಂಡ್ಯದಲ್ಲಿ ಧಾರಾಕಾರ ಮಳೆ ಸುರಿದ ಹಿನ್ನೆಲೆ ಈ ಅವಘಡ ಸಂಭವಿಸಿದೆ. ಏಷ್ಯಾದಲ್ಲಿಯೇ ಮೊಟ್ಟಮೊದಲು ನೀರಾವರಿ ಉದ್ದೇಶಕ್ಕೆ ನಿರ್ಮಸಲಾದ ಸುರಂಗ ಕಾಲುವೆ ಎಂದು ಈ ಹುಲಿಕೆರೆ ಸುರಂಗ ಕಾಲುವೆ ಪ್ರಸಿದ್ಧಿಯಾಗಿದೆ. ಮದ್ದೂರು ಮಳವಳ್ಳಿ ತಾಲೂಕಿಗೆ ಈ ಸುರಂಗ ಮಾರ್ಗದ ಮೂಲಕ ವಿಸಿ ನಾಲೆ ಹಾದು ಹೋಗಿದೆ. ವಿಸಿ ನಾಲೆಯ ಸುರಂಗ ಮಾರ್ಗದ ಭೂ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ರಾತ್ರಿ ವೇಳೆ ಭೂ ಕುಸಿತವಾಗಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೆಆರ್‌ಎಸ್ ಅಣೆಕಟ್ಟೆಯಿಂದ ರೈತರ ಜಮೀನುಗಳಿಗೆ ನೀರು ಹರಿಸಲು ಹುಲಿಕೆರೆ ಗ್ರಾಮದ ಬಳಿ ಸುರಂಗ ನಾಲೆಯನ್ನು ನಿರ್ಮಾಣ ಮಾಡಲಾಗಿತ್ತು.
ಇದನ್ನೂ ಓದಿ:ಮುಂದಿನ 3 ದಿನ ರಾಜ್ಯಾದ್ಯಂತ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ