ಕರ್ನಾಟಕ

karnataka

ETV Bharat / videos

ವಿವಿಧ ಪ್ರಕರಣಗಳ ಸಂಬಂಧ ಸಿಟಿ ಸಿವಿಲ್ ಕೋರ್ಟ್​​ನಲ್ಲಿ ಇಂದು ವಿಚಾರಣೆ ನಡೆದಿದೆ: ಡಿಕೆಶಿ - KPCC president DK shivakumar

🎬 Watch Now: Feature Video

ವಿವಿಧ ಪ್ರಕರಣ ಸಂಬಂಧ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ: ಡಿಕೆಶಿ

By

Published : Mar 2, 2023, 10:39 PM IST

ಬೆಂಗಳೂರು: ನಗರದ ಸಿವಿಲ್ ಕೋರ್ಟ್‌ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುರುವಾರ ಭೇಟಿ ನೀಡಿ ವಿಚಾರಣೆ ಎದುರಿಸಿದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿಚಾರಣೆ ಸಮಯದಲ್ಲಿ ಮಾಡಿದ ಹೋರಾಟ, ರೈತ ವಿರೋಧಿ ಕಾನೂನು ವಿರುದ್ಧದ ಹೋರಾಟ, ಮೇಕೆದಾಟು ಪಾದಯಾತ್ರೆ ಸಮಯದಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ, ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆ ಜತೆಗೆ ಆದಾಯ ತೆರಿಗೆ ಇಲಾಖೆ ಪ್ರಕರಣಗಳ ವಿಚಾರಣೆ ಇಂದು ಕೋರ್ಟ್​ನಲ್ಲಿ ನಡೆಯಿತು ಎಂದರು. 

ಈ ಎಲ್ಲ ಪ್ರಕರಣಗಳ ವಿಚಾರಣೆ ಒಂದೇ ದಿನ ಇದ್ದ ಹಿನ್ನೆಲೆಯಲ್ಲಿ ಪ್ರಜಾಧ್ವನಿ ಯಾತ್ರೆಗೆ ವಿರಾಮ ನೀಡಿ ನಾನೇ ಹಾಜರಾಗಿದ್ದೇನೆ. ಒಂದು ಪ್ರಕರಣದಲ್ಲಿ ಜಾಮೀನು ವಿಸ್ತರಣೆ ಮಾಡಿಕೊಳ್ಳಬೇಕಿತ್ತು. ಜಾಮೀನು ವಿಸ್ತರಣೆ ಆಗಿದೆ. ಉಳಿದ ಪ್ರಕರಣಗಳಲ್ಲಿ ನಾವು ಸಮಯಾವಕಾಶ ಕೇಳಿರುವ ಹಿನ್ನೆಲೆಯಲ್ಲಿ ವಿಚಾರಣೆ ಮೇ ತಿಂಗಳಿಗೆ ಮುಂದೂಡಿಕೆಯಾಗಿದೆ. ಆದಾಯ ತೆರಿಗೆ ಇಲಾಖೆ ಪ್ರಕರಣ ಕೂಡ ಮೇ ತಿಂಗಳಿಗೆ ಮುಂದೂಡಿಕೆಯಾಗಿದೆ ಎಂಬ ಡಿಕೆಶಿ ಮಾಹಿತಿ  ನೀಡಿದರು.

ಇದನ್ನೂ ಓದಿ:ಉಮೇಶ್​ ಪಾಲ್​ ಹತ್ಯೆ ಕೇಸ್​: ಶಸ್ತ್ರಾಸ್ತ್ರ ಮಾರಾಟಗಾರ ಸಫ್ದರ್ ಅಲಿ ವಿರುದ್ಧ ಬುಲ್ಡೋಜರ್ ಘರ್ಜನೆ..!

ABOUT THE AUTHOR

...view details