ಕಲಾವಿದ ಮಂಜುನಾಥ ಹಿರೇಮಠರಿಂದ ವಂದೇ ಭಾರತ ರೈಲಿನ ಮಾದರಿ ಕಲಾಕೃತಿ ತಯಾರಿ - ವಿಡಿಯೋ - ಮೋದಿ ಕಾರ್ಯಕ್ರಮ
ಧಾರವಾಡ: ಧಾರವಾಡ ಬೆಂಗಳೂರು ವಂದೇ ಭಾರತ ರೈಲು ಪ್ರಯಾಣಕ್ಕೆ ಚಾಲನೆ ಹಿನ್ನೆಲೆ ವಂದೇ ಭಾರತ ರೈಲಿನ ವಿಶೇಷ ಮಾದರಿ ತಯಾರಾಗಿದೆ. ಹೌದು ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಎಂಬುವವರು ವಂದೇ ಭಾರತ ರೈಲು ಸೃಷ್ಟಿಸಿದ್ದಾರೆ. ಮೂರು ಇಂಚು ಎತ್ತರ, ಎರಡೂವರೆ ಅಡಿ ಉದ್ದದ ರೈಲಿನ ಕಲಾಕೃತಿ ರಚನೆ ಮಾಡಿ ಪ್ರಧಾನಿಗೆ ಈ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ವಂದೇ ಭಾರತ್ ರೈಲಿನೊಂದಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿರುವ ಕಲಾಕೃತಿ ಸಹ ತಯಾರಿಸಿದ್ದು, ಕಲಾಕೃತಿ ಆಕರ್ಷಕವಾಗಿದೆ. ಥರ್ಮಾಕೋಲ್, ಪ್ಲೈವುಡ್ ತುಂಡು ಸೇರಿದಂತೆ ವಿವಿಧ ತ್ಯಾಜ್ಯಗಳಿಂದ ಈ ಕಲಾಕೃತಿ ತಯಾರಾಗಿದೆ. ಧಾರವಾಡ - ಬೆಂಗಳೂರು ವಂದೇ ಭಾರತ ರೈಲಿಗೆ ಅಧಿಕೃತ ಚಾಲನೆ ಹಿನ್ನೆಲೆ ಇಂದು ವರ್ಚುಯಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
ಧಾರವಾಡ - ಬೆಂಗಳೂರು ಸೇರಿ ದೇಶದ ಒಟ್ಟು ಐದು ರೈಲುಗಳಿಗೆ ಚಾಲನೆ ನೀಡಲಿದ್ದು, ಭೂಪಾಲದ ರಾಣಿ ಕಮಲಾಪಥಿ ರೈಲ್ವೆ ನಿಲ್ದಾಣದಿಂದ ಚಾಲನೆ ದೊರೆಯಲಿದೆ. ಮೋದಿ ಚಾಲನೆ ಬಳಿಕ ಧಾರವಾಡ ರೈಲ್ವೆ ನಿಲ್ದಾಣದಲ್ಲಿ ಸಾಂಕೇತಿಕ ಕಾರ್ಯಕ್ರಮ ನಡೆಯಲಿದೆ. ಸಾಂಕೇತಿಕ ಉದ್ಘಾಟನೆ ಬಳಿಕ ಧಾರವಾಡದಿಂದ ವಂದೇ ಭಾರತ್ ರೈಲು ಹೊರಡಲಿದೆ. ಬೆಳಗ್ಗೆ 9.30ಕ್ಕೆ ಧಾರವಾಡದಿಂದ ನಿರ್ಗಮಿಸಲಿದೆ. ಸಂಜೆ 6.40ಕ್ಕೆ ಬೆಂಗಳೂರು ತಲುಪಲಿದೆ. ಇಂದು ಮಾತ್ರ ಕೆಲವಡೆ ನಿಲುಗಡೆಯಾಗಲಿದ್ದು, ನಾಳೆಯಿಂದ ಕೇವಲ ನಾಲ್ಕು ಕಡೆಗಳಲ್ಲಿ ಮಾತ್ರ ನಿಲುಗಡೆಯಾಗಲಿದೆ.
ಇದನ್ನೂ ಓದಿ:Vande Bharat: ಬೆಂಗಳೂರು - ಧಾರವಾಡ ವಂದೇ ಭಾರತ್ ರೈಲಿಗೆ ಇಂದು ಪ್ರಧಾನಿಯಿಂದ ಚಾಲನೆ: ಪ್ರಯಾಣದ ದರ ಎಷ್ಟು ಗೊತ್ತಾ?