ಹಾವೇರಿಯಲ್ಲಿ ವಾಲ್ಮೀಕಿ ಜಯಂತಿ: ಮೆರವಣಿಗೆಯಲ್ಲಿ ಡೊಳ್ಳು ಬಾರಿಸಿದ ಅಪರ ಜಿಲ್ಲಾಧಿಕಾರಿ- ವಿಡಿಯೋ - ಡೊಳ್ಳು ಬಾರಿಸಿದ ಅಪರ ಜಿಲ್ಲಾಧಿಕಾರಿ
Published : Oct 29, 2023, 10:30 AM IST
ಹಾವೇರಿ: ನಗರದಲ್ಲಿ ಶನಿವಾರ ವಾಲ್ಮೀಕಿ ಮಹರ್ಷಿ ಜಯಂತಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಮೊದಲಿಗೆ ಪುರಸಿದ್ದೇಶ್ವರ ದೇವಸ್ಥಾನದಿಂದ ವಾಲ್ಮೀಕಿ ಮಹರ್ಷಿ ಭಾವಚಿತ್ರದ ಮೆರವಣಿಗೆ ಆರಂಭವಾಯಿತು. ಈ ಮೆರವಣಿಗೆಯಲ್ಲಿ ಪಾಲ್ಗೊಂಡ ಹಾವೇರಿ ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಅವರು ರಸ್ತೆಯಲ್ಲಿ ಕಲಾವಿದರ ಜೊತೆ ಸೇರಿಕೊಂಡು ಡೊಳ್ಳು ಮತ್ತು ಸಾಮಾಳ ಬಾರಿಸುವ ಮೂಲಕ ಗಮನ ಸೆಳೆದರು. ಅಲ್ಲದೇ, ಸಮಾಜದ ನಾಯಕರ ಜೊತೆ ಹೆಜ್ಜೆ ಹಾಕಿದ ವಿಡಿಯೋಗಳು ಕೂಡ ವೈರಲ್ ಆಗಿವೆ.
ಮತ್ತೊಂದೆಡೆ, ಬೆಂಗಳೂರಿನ ವಿಧಾನಸೌಧದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಪ್ರತ್ಯೇಕ ಸಚಿವಾಲಯ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ, ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಇದೇ ವೇಳೆ ಮಾತನಾಡಿ ಸಿಎಂ, ರಾಜ್ಯದ ಸಮಸ್ತ ಜನತೆಗೆ ವಾಲ್ಮಿಕಿ ಜಯಂತಿಯ ಶುಭಾಶಯಗಳನ್ನು ತಿಳಿಸಿದರು. ಎಂಟು ಮಂದಿ ಸಾಧಕರಿಗೆ ಮಹರ್ಷಿ ವಾಲ್ಮಿಕಿ ಮಹರ್ಷಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದನ್ನೂ ಓದಿ:ವಿಜೃಂಭಣೆಯ ವಾಲ್ಮೀಕಿ ಜಯಂತಿ ಆಚರಣೆಗೆ ನಿರ್ಧಾರ: ಸಚಿವ ಬಿ.ನಾಗೇಂದ್ರ