Watch... ಫೆಬ್ರವರಿ 23ರಿಂದ ಸ್ನೋಬೋರ್ಡ್ ಚಾಂಪಿಯನ್‌ಶಿಪ್.. ಹೀಗಿದೆ ನೋಡಿ ತಯಾರಿ - ಧಾರ್ಮಿಕ ಪ್ರವಾಸೋದ್ಯಮಕ್ಕೆ ಒತ್ತು
ಚಮೋಲಿ:ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಉಂಟಾಗಿದ್ದ ಹಿಮಪಾತ ತಗ್ಗಿರುವ ಹಿನ್ನೆಲೆಯಲ್ಲಿ ರಾಷ್ಟ್ರ ಮಟ್ಟದ ಸೀನಿಯರ್ ಮತ್ತು ಜೂನಿಯರ್ ಆಲ್ಪೈನ್ ಸ್ಕೀ ಸ್ಪರ್ಧೆ ಹಾಗೂ ಸ್ನೋಬೋರ್ಡ್ ಚಾಂಪಿಯನ್‌ಶಿಪ್‌ನ ದಿನಾಂಕವನ್ನು ಘೋಷಣೆ ಮಾಡಲಾಗಿದೆ ಎಂದು ಸ್ಕೀಯಿಂಗ್ ಮತ್ತು ಸ್ನೋಬೋರ್ಡ್ನ ಕಾರ್ಯದರ್ಶಿ ಪ್ರವೀಣ್ ಶರ್ಮಾ ಹೇಳಿದರು.
ಇತ್ತೀಚೆಗೆ ಜೋಶಿಮಠದಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಈ ಸ್ಪರ್ಧೆಗಳ ಆಯೋಜನೆಯೂ ವಿಳಂಬವಾಗಿತ್ತು. ಹಿಮಪಾತ ಸಂಪೂರ್ಣ ಕಡಿಮೆಯಾಗಿರುವ ಬೆನ್ನಲ್ಲೆ ಫೆಬ್ರವರಿ 23ರಿಂದ 26ರವರೆಗೆ ಔಲಿಯಲ್ಲಿ ಸ್ಪರ್ಧೆಗಳು ನಡೆಯಲಿವೆ.
ಧಾರ್ಮಿಕ ಪ್ರವಾಸೋದ್ಯಮಕ್ಕೂ ಹೆಚ್ಚು ಒತ್ತು: ಈ ಹಿಂದೆ, ಫೆಬ್ರವರಿ 2ರಿಂದ 8ರವರೆಗೆ ರಾಷ್ಟ್ರೀಯ ಚಾಂಪಿಯನ್‌ಶಿಪ್ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಜೋಶಿಮಠದಲ್ಲಿ ಸಂಭವಿಸಿದ ದುರಂತ ಮತ್ತು ಹಿಮಪಾತದಿಂದ ಕ್ರೀಡಾಕೂಟದ ದಿನಾಂಕವನ್ನು ಮುಂದೂಡಿಸಲಾಗಿತ್ತು. ಈ ವರ್ಷ ಸ್ಪರ್ಧೆಗಳನ್ನು ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಮುಂಬರುವ ಋತುವಿನಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೂ ಹೆಚ್ಚು ಒತ್ತು ನೀಡುವ ಸಾಧ್ಯತೆಯಿದೆ.
ಮುಂಬರುವ ಚಳಿಗಾಲದ ಕ್ರೀಡೆಗಳಿಗೆ ಅಧಿಕಾರಿಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಅಧಿಕಾರಿಯೊಬ್ಬರ ಪ್ರಕಾರ, ದೇಶಾದ್ಯಂತ ಒಟ್ಟು ನಾಲ್ಕು ಡಜನ್ ತಂಡಗಳು ಆಟಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈವೆಂಟ್‌ನಲ್ಲಿ ಆಲ್ಪೈನ್ ಸ್ಕೀ ಮತ್ತು ಸ್ನೋಬೋರ್ಡ್ ಚಾಂಪಿಯನ್‌ಶಿಪ್ ಪ್ರಮುಖ ಆಕರ್ಷಣೆಯಾಗಿದೆ.
ರೋಪ್‌ವೇ ಕಾರ್ಯಾಚರಣೆ:ಇನ್ನೂ ಜೋಶಿಮಠದ ಭೂಕುಸಿತದಿಂದ ಮುಂಜಾಗ್ರತಾ ಕ್ರಮವಾಗಿ ಮುಚ್ಚಲಾಗಿರುವ ರೋಪ್‌ವೇ ಕಾರ್ಯಾಚರಣೆ ಬಗ್ಗೆ ಅನುಮಾನವಿದೆ. ಔಲಿಯು ಉತ್ತರಾಖಂಡದ ಚಮೋಲಿ ಜಿಲ್ಲೆಯು ಹಿಮಭರಿತ ಪರ್ವತಗಳೊಂದಿಗೆ ಅದ್ಭುತವಾದ ಹಿಮದ ಇಳಿಜಾರುಗಳಿಗೆ ಹೆಸರುವಾಸಿಯಾಗಿದೆ. ಔಲಿಗೆ ಹತ್ತಿರದಲ್ಲಿ ರಿಷಿಕೇಶ್, ರಾಮನಗರ ಮತ್ತು ಹಲ್ದ್ವಾನಿ- ಕತ್ಗೊಡಮ್ ರೈಲು ನಿಲ್ದಾಣಗಳು ಇವೆ. ಇನ್ನೂ ಔಲಿಗೆ ತಲುಪಲು ಜಾಲಿಗ್ರಾಂಟ್ ಹತ್ತಿರ ವಿಮಾನ ನಿಲ್ದಾಣವೂ ಇದೆ.
ಇದನ್ನೂ ಓದಿ:ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಈ ಐವರ ಮೇಲೆ ಎಲ್ಲರ ದೃಷ್ಟಿ..