ಋಷಿಕೇಶ: ಗಂಗಾರತಿ ಬೆಳಗಿದ ಬಾಲಿವುಡ್ ನಟಿ ರವೀನಾ ಟಂಡನ್- ವಿಡಿಯೋ - ಪಾಟ್ನಾ ಶುಕ್ಲಾತ್
Published : Nov 9, 2023, 11:04 AM IST
ಋಷಿಕೇಶ(ಉತ್ತರಖಂಡ):ದೀಪಾವಳಿ ಹಬ್ಬಕ್ಕೂ ಮುನ್ನ ಪುತ್ರಿ ರಾಶಾ ಜೊತೆಗೆ ಬಾಲಿವುಡ್ ನಟಿ ರವೀನಾ ಟಂಡನ್ ಅವರು ಪವಿತ್ರ ಧಾರ್ಮಿಕ ಕ್ಷೇತ್ರ ರಿಷಿಕೇಶಕ್ಕೆ ಭೇಟಿ ನೀಡಿದ್ದಾರೆ. ಋಷಿಕೇಶದ ಪರಮಾರ್ಥ ನಿಕೇತನ ಘಾಟ್‌ನಲ್ಲಿ ಗುರುವಾರ ಬೆಳಿಗ್ಗೆ ಪುರೋಹಿತರ ಸಮ್ಮುಖದಲ್ಲಿ ಭಜನೆ ಹಾಡುವ ಮೂಲಕ ಭಕ್ತಿಯಿಂದ ಗಂಗಾರತಿ ನೆರವೇರಿಸಿದರು.
ರವೀನಾ ಟಂಡನ್ ಬಾಲಿವುಡ್‌ನ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಘಾಟ್‌ಗೆ ಆಗಮಿಸಿದ ಸಂದರ್ಭದಲ್ಲಿ ರವೀನಾ ಕೆಂಪು ಬಣ್ಣದ ದಿರಿಸಿನಲ್ಲಿದ್ದರು. ಶಾಲು ಹಾಕಿಕೊಂಡಿದ್ದರು. ಪೂಜೆಯ ವೇಳೆ ಹಣೆಗೆ ತಿಲಕ ಹಚ್ಚಿಕೊಂಡಿದ್ದರು.
ವಿಡಿಯೋದಲ್ಲಿ ರವೀನಾ ಟಂಡನ್ ಭಜನೆಗಳನ್ನು ಹಾಡುತ್ತಿರುವುದು ಮತ್ತು ಕೈಯಲ್ಲಿ ದೀಪ ಹಿಡಿದು ಆರತಿ ಮಾಡುತ್ತಿರುವುದು ನೋಡಬಹುದು. ಪುರೋಹಿತರು ನಟಿಗೆ ಸಲಹೆ ನೀಡುತ್ತಿದ್ದರು.
ರವೀನಾ ಟಂಡನ್ ಇತ್ತೀಚೆಗೆ ಮುಂಬೈನಲ್ಲಿ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ದೀಪಾವಳಿ ಪಾರ್ಟಿಯಲ್ಲಿ ಭಾಗವಹಿಸಿದ್ದರು. ರವೀನಾ ಶೀಘ್ರದಲ್ಲೇ ರೊಮ್ಯಾಂಟಿಕ್-ಕಾಮಿಡಿ ಚಿತ್ರ 'ಘುಡ್ಚಾಧಿ'ಯಲ್ಲಿ ಸಂಜಯ್ ದತ್, ಪಾರ್ಥ್ ಸಮತಾನ್ ಮತ್ತು ಖುಶಾಲಿ ಕುಮಾರ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, 'ಪಾಟ್ನಾ ಶುಕ್ಲಾತ್' ಮತ್ತು 'ವೆಲ್‌ಕಮ್ ಟು ದಿ ಜಂಗಲ್' ನಂತಹ ಪ್ರಾಜೆಕ್ಟ್ಗಳಲ್ಲಿಯೂ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ:'ಯಾರಿಗೂ ಹೀಗಾಗಬಾರದು': ರಶ್ಮಿಕಾ ಡೀಪ್‌ಫೇಕ್ ವಿಡಿಯೋಗೆ ವಿಜಯ್ ದೇವರಕೊಂಡ ಪ್ರತಿಕ್ರಿಯೆ