ಹುಣ್ಣಿಮೆ ಪೂಜೆಯ ನಿಮಿತ್ತ ದತ್ತ ಪೀಠಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ - ಈಟಿವಿ ಭಾರತ್ ಕನ್ನಡ ನ್ಯೂಸ್
Published : Sep 1, 2023, 6:26 AM IST
ಚಿಕ್ಕಮಗಳೂರು :ಹುಣ್ಣಿಮೆ ಪೂಜೆ ನಿಮಿತ್ತ ದತ್ತ ಪೀಠಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ದತ್ತ ಪೀಠದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಆಯೋಜಿಸಿದ್ದ ವಿಶೇಷ ಹೋಮದಲ್ಲಿ ಭಾಗಿ ಆಗಿದ್ದು, ದತ್ತಪೀಠದ ಗುಹೆಯಲ್ಲಿರುವ
ದತ್ತ ಪಾದುಕೆ ದರ್ಶನ ಮಾಡಿ, ಅದಕ್ಕೆ ವಿಶೇಷ ಪೂಜೆಯನ್ನು ಶೋಭಾ ಕರಂದ್ಲಾಜೆ ಸಲ್ಲಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು ದತ್ತಪೀಠದಲ್ಲಿ ನಿರಂತರವಾಗಿ ಪೂಜೆ ನಡೆಯಬೇಕು. ನಮ್ಮ ದತ್ತನಿಗೆ ತ್ರಿಕಾಲ ಪೂಜೆ ಆಗಬೇಕು ಎನ್ನುವುದು ನನ್ನ ಅಪೇಕ್ಷೆಯಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ, ನಮ್ಮ ಹಾಗೂ ಕಾರ್ಯಕರ್ತರ ಹೋರಾಟದಿಂದ ಯಶಸ್ಸು ಸಿಕ್ಕಿದೆ. ಇಲ್ಲಿರುವ ಎಲ್ಲ ಬೇಲಿಗಳಿಂದ ಹೊರ ಬರಬೇಕು ಎಂಬ ಆಸೆ ಇದೆ. ಇಲ್ಲಿ ಮುಂದಿನ ದಿನಗಳಲ್ಲಿ ಬೇಲಿ ರಹಿತವಾಗಿ ಮಾಡುವುದೇ ನಮ್ಮ ಸಂಕಲ್ಪ ಆಗಿದ್ದು, ಆ ಸಂಕಲ್ಪಕ್ಕಾಗಿ ಇಲ್ಲಿದೆ ಬಂದು ವಿಶೇಷ ಪೂಜೆಯನ್ನು ಮಾಡಿದ್ದೇನೆ. ದೇಶಾದ್ಯಂತ ಭಕ್ತರು ದತ್ತಪೀಠಕ್ಕೆ ಬರುವ ಕೆಲಸ ಆಗಬೇಕು. ಇದಕ್ಕೆ ದತ್ತ ಹರಿಸಿ ಯಶಸ್ವಿಯಾಗುವಂತೆ ಮಾಡುತ್ತಾನೆ ಎಂಬ ನಂಬಿಕೆ ಇದೆ ಎಂದರು.
ಇದನ್ನೂ ಓದಿ :ರಾಯರ 352ನೇ ಆರಾಧನಾ ಮಹೋತ್ಸವ : ಅದ್ಧೂರಿಯಾಗಿ ನಡೆಯುತ್ತಿರುವ ಪೂರ್ವಾರಾಧನೆ