’’ರಾಹುಲ್ ಗಾಂಧಿ ಏನೇನೋ ಮಾತಾಡ್ತಾರೆ, ನೀವೂ ಯಾಕೆ ಹಾಗಾದ್ರಿ ಸಿದ್ದರಾಮಯ್ಯ‘‘: ಪ್ರಹ್ಲಾದ್ ಜೋಶಿ ಟಾಂಗ್ - ನೀವೂ ಯಾಕೆ ಹಾಗಾದ್ರಿ ಸಿದ್ದರಾಮಯ್ಯ
ಚಿಕ್ಕಮಗಳೂರು: ಸಿದ್ದರಾಮಯ್ಯನವರೇ ಆ ರಾಹುಲ್ ಗಾಂಧಿ ಜೊತೆ ಏಕೆ ಮಾತನಾಡ್ತೀರಾ, 11 ಬಜೆಟ್ ಮಂಡಿಸಿ, 5 ವರ್ಷ ಸಿಎಂ ಆಗಿದ್ದೋರು. ಆ ರಾಹುಲ್ ಗಾಂಧಿಗೆ ತಿಳಿವಳಿಕೆ ಇಲ್ಲದೇ ಏನೇನೋ ಮಾತಾಡ್ತಾರೆ. ನೀವೂ ಏಕೆ ಅವರ ರೀತಿ ಮಾತನಾಡ್ತೀರಾ ಸಿದ್ದರಾಮಯ್ಯ ಅವರೇ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟಾಂಟ್ ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಮನ ಬಂದಂತೆ ಮಾತಾಡೋದಲ್ಲ, ದೇಶ-ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹೇಗಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಬೊಮ್ಮಾಯಿ ಸಿಎಂ ಆಗಿದ್ದಾರೆ, ಅವರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದೆ. ಮೋದಿ ಅವರು ಮತ್ತೆ ಪ್ರಧಾನಿಯಾಗೋದು ಸೂರ್ಯ- ಚಂದ್ರರಿರುವಷ್ಟೇ ಸತ್ಯ. ಇವರು ಏನೇ ಮಾಡಿದರೂ ಅಷ್ಟೇ, ರಾಜ್ಯ ಮತ್ತು ದೇಶದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಚಿಕ್ಕಮಗಳೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:18 ವರ್ಷದ ಮಕ್ಕಳಿಗೆ ಮದ್ಯದಂಗಡಿ ಪ್ರವೇಶ, ಪಾರ್ಸಲ್ಗೆ ಅವಕಾಶ: ಮಕ್ಕಳ ಹಕ್ಕುಗಳ ಆಯೋಗ ಆಕ್ಷೇಪ