ಮೋದಿ ಸರ್ಕಾರ ಬಂದ ಮೇಲೆ ರೈಲ್ವೆ ಅಭಿವೃದ್ಧಿಗೆ ಹೆಚ್ಚಿನ ಒತ್ತು: ಸಚಿವ ಅಶ್ವಿನಿ ವೈಷ್ಣವ್ - Bangalore Suburban Project
Published : Nov 27, 2023, 4:50 PM IST
|Updated : Nov 27, 2023, 6:24 PM IST
ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈಲ್ವೆ ಪಾಲು ಶೇ.27ಕ್ಕೆ ಇಳಿದಿತ್ತು. 2014ರಲ್ಲಿ ಪ್ರಧಾನಿ ಮೋದಿ ಅವರು ಅತ್ಯಂತ ದಿಟ್ಟ ನಿರ್ಧಾರ ಕೈಗೊಂಡು ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್‌ನೊಂದಿಗೆ ವಿಲೀನಗೊಳಿಸಿ, ರೈಲ್ವೆ ಅಭಿವೃದ್ಧಿಗೆ ಕ್ರಮ ಕೈಗೊಂಡರು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಯಶವಂತಪುರ ರೈಲ್ವೆ ನಿಲ್ದಾಣದ ಪುನರ್ ನಿರ್ಮಾಣ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ವಿಲೀನದ ನಂತರ ರೈಲ್ವೆ ನಿಧಿ ಹಣಕಾಸು ಇಲಾಖೆಯಿಂದಲೇ ಪಡೆಯಲಾರಂಭಿಸಿದೆವು. ಕಳೆದ ವರ್ಷ ಭಾರತ ದೇಶದ ರೈಲು ನಿಗಮಕ್ಕೆ ಸುಮಾರು 5,200 ಕಿ ಮೀ ರೈಲು ಹಳಿ ಹೆಚ್ಚುವರಿಯಾಗಿ ಸೇರ್ಪಡೆಯಾಗಿದೆ. ಸ್ವಿಟ್ಜರ್ಲೆಂಡ್‌ನಲ್ಲಿ ಒಟ್ಟಾರೆ 5,000 ಕಿ ಮೀ. ರೈಲ್ವೆ ಹಳಿ ಇದೆ. ಈ ಪ್ರಮಾಣದಷ್ಟು ರೈಲ್ವೆ ಟ್ರ್ಯಾಕ್ ಅನ್ನು ನಮ್ಮ ಸರ್ಕಾರ ಕೇವಲ ಒಂದು ವರ್ಷದಲ್ಲಿ ಮಾಡಿ ಮುಗಿಸಿದೆ. ವಿಶೇಷ ಎಂದರೆ ಕರ್ನಾಟಕ ರಾಜ್ಯವೊಂದರಲ್ಲೇ 57 ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
‘ಬೆಂಗಳೂರು ಉಪನಗರ ಯೋಜನೆಯ ಕುರಿತು ಇಂದು ಬೆಳಗ್ಗೆ ವಿಸ್ತೃತ ಚರ್ಚೆ ಹಾಗೂ ಪರಿಶೀಲನೆ ನಡೆಸಿದ್ದೇವೆ. ಅದಕ್ಕೂ ಮುನ್ನ ಯಶವಂತಪುರ ನಿಲ್ದಾಣದ ಪುನರ್ ನಿರ್ಮಾಣ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ್ದೆವು. ನಿರ್ಮಾಣ ಪ್ರಗತಿಯಿಂದ ತುಂಬಾ ಖುಷಿಯಾಗಿದೆ’ ಎಂದು ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಬೆಂಗಳೂರಿನ ಉಪನಗರ ಯೋಜನೆಯ ಪ್ರತಿಯೊಂದು ಅಂಶಕ್ಕೂ ಸಂಪೂರ್ಣ ಒತ್ತು ನೀಡಿ ಹಾಗೂ ಪ್ರಾಮಾಣಿಕತೆಯಿಂದ ಮಾಡಿ ಮುಗಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಇದೇ ವೇಳೆ ಸೂಚಿಸಿದರು.
ಇದನ್ನೂ ಓದಿ:ಕೇಂದ್ರ ಸರ್ಕಾರ ದೇಶದ ಜನರ ಹೃದಯದಲ್ಲಿ ವಿಶ್ವಾಸ ಗಳಿಸಿದೆ: ಅಶ್ವಿನಿ ವೈಷ್ಣವ್