ಮಣಿಪುರದ ಕುಕಿ ಸಮುದಾಯದ ಜನರನ್ನು ಭೇಟಿ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ..
ಇಂಫಾಲ್(ಮಣಿಪುರ): ಹಿಂಸಾಚಾರ ಪೀಡಿತ ಈಶಾನ್ಯ ರಾಜ್ಯ ಮಣಿಪುರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಭೇಟಿ ನೀಡಿದರು. ಈ ವೇಳೆ ಅವರು " ಸಾಧ್ಯವಾದಷ್ಟು ಬೇಗ ಮಣಿಪುರದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಮತ್ತು ಸ್ಥಳಾಂತರಗೊಂಡ ಜನರನ್ನು ಅವರ ಮನೆಗಳಿಗೆ ಮರಳಿಸಲು ನಾವು ಬದ್ಧರಾಗಿದ್ದೇವೆ" ಎಂದು ಹೇಳಿದರು. ಅಮಿತ್ ಶಾ ಕಾಂಗ್ಪೊಕ್ಪಿಯ ಪರಿಹಾರ ಶಿಬಿರಕ್ಕೆ ಭೇಟಿ ನೀಡಿ ಅಲ್ಲಿನ ಕುಕಿ ಸಮುದಾಯದ ಜನರನ್ನು ಭೇಟಿಯಾದರು.
ನಂತರ ಮಣಿಪುರದ ಮೊರೆಹ್‌ನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು. ಸಾಧ್ಯವಾದಷ್ಟು ಬೇಗ ಮಣಿಪುರದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಮತ್ತು ಅವರು ತಮ್ಮ ಮನೆಗಳಿಗೆ ಮರಳಿಸಲು ನಾವು ಬದ್ಧರಾಗಿದ್ದೇವೆ " ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ ಭರವಸೆ ನೀಡಿದ್ದಾರೆ. ಜೊತೆಗೆ ಅವರು ಮೊರೆಹ್‌ನಲ್ಲಿ ಕುಕಿ ಮತ್ತು ಇತರ ಸಮುದಾಯಗಳ ನಿಯೋಗಗಳೊಂದಿಗೆ ಸಭೆ ನಡೆಸಿದರು. ಮಣಿಪುರದಲ್ಲಿ ಸಹಜತೆಯನ್ನು ಪುನಃಸ್ಥಾಪಿಸಲು ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ:ಹಿಂಸಾಚಾರ ಪೀಡಿತ ಮಣಿಪುರಕ್ಕೆ ಅಮಿತ್ ಶಾ ಭೇಟಿ: ಮುಖಂಡರು, ಅಧಿಕಾರಿಗಳೊಂದಿಗೆ ನಿರಂತರ ಸಭೆ