ನಿರ್ಮಾಣ ಹಂತದ ಕಟ್ಟಡ ಕುಸಿದು ಇಬ್ಬರ ಸಾವು: ಒಬ್ಬರಿಗೆ ಗಂಭೀರ ಗಾಯ - ETV Bharath Karnataka
ಥಾಣೆ (ಮಹಾರಾಷ್ಟ್ರ):ಮುಂಜಾನೆ ದುರ್ಘಟನೆ ನಡೆದಿದ್ದು, ಮಹಾರಾಷ್ಟ್ರದ ಥಾಣೆಯ ನೌಪಾದ ಶಿವಾಜಿನಗರದ ಬಿ ಕ್ಯಾಬಿನ್‌ನಲ್ಲಿರುವ ಸತ್ಯನಿಲಯಂ ಸಹಕಾರಿ ಹೌಸಿಂಗ್ ಸೊಸೈಟಿಯ ಮರು ನಿರ್ಮಾಣ ಕೆಲಸ ಮಾಡುತ್ತಿದ್ದ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಓರ್ವ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಹಬೀಬ್ ಬಾಬು ಶೇಖ್ (42) ಮತ್ತು ರಂಜಿತ್ ಕುಮಾರ್ ಸೈನಿ (35) ಎಂದು ಗುರುತಿಸಲಾಗಿದೆ. ನಿರ್ಮಲ್ ರಾಮಲಾಲ್ ರಾಬ್ (49) ಎಂಬುವವರಿಗೆ ಗಾಯಗಳಾಗಿದೆ. ನಿರ್ಮಾಣ ಸ್ಥಳದಲ್ಲಿ ಕಾರ್ಮಿಕರ ಸುರಕ್ಷತೆಯನ್ನು ನಿರ್ಲಕ್ಷಿಸಿದ್ದರಿಂದ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ದೂರಿದ್ದಾರೆ. ಸ್ಥಳೀಯರ ದೂರಿನನ್ವಯ ಪೊಲೀಸರು ಬಿಲ್ಡರ್ಗಳ ಮೇಲೆ ಸುರಕ್ಷಿತ ಕ್ರಮ ಕೈಗೊಂಡಿಲ್ಲ ಎಂಬ ಕಾರಣಕ್ಕೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಜೆಡಿಎಸ್ ಜಿಲ್ಲಾಧ್ಯಕ್ಷರ ಕಾರು ಅಪಘಾತ: ಮೂವರಿಗೆ ಗಂಭೀರ ಗಾಯ