ಕರ್ನಾಟಕ

karnataka

ಸುರಕ್ಷತಾ ಕ್ರಮ ಅನುಸರಿಸದ, ಅನಧಿಕೃತ ಶಾಲಾ ವಾಹನ ಜಪ್ತಿ

ETV Bharat / videos

ಸಾರಿಗೆ ಇಲಾಖೆಯಿಂದ ವಿಶೇಷ ಕಾರ್ಯಾಚರಣೆ: ಸುರಕ್ಷತಾ ಕ್ರಮ ಅನುಸರಿಸದ, ಅನಧಿಕೃತ ಶಾಲಾ ವಾಹನ ಜಪ್ತಿ

By ETV Bharat Karnataka Team

Published : Aug 22, 2023, 12:52 PM IST

ಬೆಂಗಳೂರು: ಅನಧಿಕೃತ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವವರ ವಿರುದ್ಧ ಕಾರ್ಯಾಚರಣೆ ನಡೆಸಿದ ಸಾರಿಗೆ ಇಲಾಖೆ ಅಧಿಕಾರಿಗಳ 15ಕ್ಕೂ ಅಧಿಕ ವಾಹನಗಳನ್ನ ಜಪ್ತಿ ಮಾಡಿದ್ದಾರೆ‌. ಸಾರಿಗೆ ಇಲಾಖೆಯ ಜಂಟಿ ಆಯುಕ್ತೆ ಶೋಭಾ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಶಾಲಾ ಮಕ್ಕಳನ್ನು ಕರೆದೊಯ್ಯುವ ಬಸ್, ಕಾರು ಸೇರಿದಂತೆ ವಿವಿಧ ವಾಹನಗಳನ್ನು ತಪಾಸಣೆ ನಡೆಸಲಾಗಿದೆ.

ಅನಧಿಕೃತವಾಗಿ ವೈಟ್ ಬೋರ್ಡ್ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿರುವುದರ ಕುರಿತು ದೂರು ಬಂದ ಹಿನ್ನೆಲೆ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಅನೇಕ ವಾಹನಗಳಲ್ಲಿ ಸಿಸಿ ಕ್ಯಾಮರಾ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಕಿಟಕಿಗಳಿಗೆ ಗ್ರಿಲ್ ಇಲ್ಲದಿರುವುದು ಸೇರಿದಂತೆ ಶಾಲಾ ಮಕ್ಕಳ ಸುರಕ್ಷತೆ ಕ್ರಮಗಳನ್ನು ಅನುಸರಿಸದಿರುವುದು ಕಂಡು ಬಂದಿದೆ. ಆದ್ದರಿಂದ ಅಂತಹ 15ಕ್ಕೂ ಅಧಿಕ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

"ಕೆಲವು ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯಲು ಅವಕಾಶ ಇಲ್ಲ. ಅದಕ್ಕಾಗಿಯೇ ಪರಿಶೀಲನೆ ಮಾಡಿ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಕೆಲವರ ಬಳಿ ಸೂಕ್ತ ದಾಖಲಾತಿಗಳಿಲ್ಲ. ಇನ್ನೂ ಕೆಲವರು ಟ್ಯಾಕ್ಸ್ ಪಾವತಿಸಿಲ್ಲ. ಶಾಲಾ ಮಕ್ಕಳನ್ನು ಕರೆದೊಯ್ಯಲು ಕೆಲವು ಸೂಚನೆಗಳಿವೆ. ಅವೆಲ್ಲವನ್ನು ಉಲ್ಲಂಘನೆ ಮಾಡಲಾಗಿದೆ. ವಾಹನಕ್ಕೆ ಎಫ್​ಸಿ ಇಲ್ಲ, ಪರ್ಮಿಟ್ ಇಲ್ಲ. ಆದರೂ ಇವರು ಮಕ್ಕಳನ್ನು ಕರೆದೊಯ್ಯುತ್ತಿದ್ದರು. ಪೋಷಕರು ಕೂಡ ಈ ಬಗ್ಗೆ ಗಮನ ವಹಿಸಬೇಕು"- ಸಾರಿಗೆ ಇಲಾಖೆಯ ಜಂಟಿ ಆಯುಕ್ತೆ ಶೋಭಾ 

ಇದನ್ನೂ ಓದಿ:ಆನೇಕಲ್​: 45 ದ್ವಿಚಕ್ರ ವಾಹನ ಜಪ್ತಿ, 14 ಆರೋಪಿಗಳು ಸೆರೆ

ABOUT THE AUTHOR

...view details