ಕರ್ನಾಟಕ

karnataka

Sri Vishwaprasanna Theertha Swamiji Saved the Kitten That Had Fallen into the Well

ETV Bharat / videos

ಬಾವಿಗಿಳಿದು ಬೆಕ್ಕು ರಕ್ಷಿಸಿದ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ: ವಿಡಿಯೋ - ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿ ರಕ್ಷಣೆ

By

Published : Jun 19, 2023, 3:06 PM IST

ಉಡುಪಿ:ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಬೆಕ್ಕಿನ ಮರಿಯನ್ನು ರಕ್ಷಣೆ ಮಾಡಿದ್ದಾರೆ. ಅಂದಾಜು 40 ಅಡಿ ಆಳದ ಬಾವಿಗೆ ಶ್ರೀಗಳು ಇಳಿದಿದ್ದಾರೆ. ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಮುಚ್ಚುಕೋಡು ಸುಬ್ರಹ್ಮಣ್ಯ ದೇವಾಲಯದಲ್ಲಿನ ಬಾವಿಗೆ ಬಿದ್ದ ಬೆಕ್ಕು ಮೇಲೆ ಬರಲಾಗದೆ ಕೂಗುತ್ತಿತ್ತು. ಈ ವಿಷಯ ತಿಳಿದ ಶ್ರೀಗಳು ಹಗ್ಗದ ಸಹಾಯ ಪಡೆದು ಸರಸರನೇ ‌ಬಾವಿಗಿಳಿದರು. ಜೀವದಾಸೆಗೆ ಚೀರಾಡುತ್ತಿದ್ದ ಬೆಕ್ಕನ್ನು ಜಾಗ್ರತೆಯಿಂದ ಮೆಲಕ್ಕೆ ತಂದು ರಕ್ಷಣೆ ಮಾಡಿದರು.

ಇತ್ತೀಚೆಗೆ ಶ್ರೀಗಳು ಹಲಸಿನ ಮರ ಹತ್ತಿ ಹಲಸಿನ ಹಣ್ಣು ಕೊಯ್ದು ಸುದ್ದಿಯಾಗಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋವೊಂದು ವೈರಲ್ ಆಗಿತ್ತು. ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಧಾರ್ಮಿಕ ಹಾಗು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ತಮ್ಮ ಬಿಡುವಿನ ವೇಳೆಯಲ್ಲಿ ನೀಲಾವರದ ಗೋಶಾಲೆಗೆ ಭೇಟಿ ನೀಡುತ್ತಾರೆ. ತಮ್ಮ ಶಿಷ್ಯಂದಿರ ಜೊತೆ ಮಾತುಕತೆ, ಸಂವಾದ ನಡೆಸುತ್ತಾರೆ. ಆಗಾಗ್ಗೆ ವಿಶೇಷ ರೀತಿಯಲ್ಲಿ ಗಮನ ಸೆಳೆಯುವುದುಂಟು.  

ಇದನ್ನೂ ಓದಿ: ಆನೆ ಜೊತೆ ಫೋಟೋ ತೆಗೆದುಕೊಳ್ಳಲು ಹೋದ ಯುವಕ... ಒಂಟಿ ಸಲಗದ ದಾಳಿಯಿಂದ ಜಸ್ಟ್ ಮಿಸ್!!

ABOUT THE AUTHOR

...view details