ಕರ್ನಾಟಕ

karnataka

ಬಿಜೆಪಿ ಶಾಸಕ ಡಾ ವೈ ಭರತ್ ಶೆಟ್ಟಿ

ETV Bharat / videos

ಉಡುಪಿ ವಿವಾದ: ರಾಜ್ಯಪಾಲರ ಭೇಟಿಯಾಗಲಿರುವ ಕರಾವಳಿ ಬಿಜೆಪಿ ಶಾಸಕರು - ಈಟಿವಿ ಭಾರತ್ ಕನ್ನಡ ಸುದ್ದಿ

By

Published : Aug 2, 2023, 8:13 PM IST

ಮಂಗಳೂರು :ಉಡುಪಿ ಪ್ರಕರಣ ಸಂಬಂಧ ಕರಾವಳಿಯ ಬಿಜೆಪಿ ಶಾಸಕರು ಶುಕ್ರವಾರ ರಾಜ್ಯಪಾಲರನ್ನು ಭೇಟಿಯಾಗಲಿದ್ದೇವೆ ಎಂದು ಬಿಜೆಪಿ ಶಾಸಕ ಡಾ ವೈ ಭರತ್ ಶೆಟ್ಟಿ ತಿಳಿಸಿದರು.

ಈ ಬಗ್ಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಮಕ್ಕಳಾಟಿಕೆ ಎಂದು‌ ಕಾಂಗ್ರೆಸ್​ ಪಕ್ಷದವರು ನಿರ್ಲಕ್ಷ್ಯ ಮಾಡಲು ಹೋದರು. ಗೃಹ ಸಚಿವರು ಕೂಡ ಅದನ್ನೇ ಹೇಳಿದರು. ಕಾಂಗ್ರೆಸ್​ನ ಅಧಿಕೃತ ಟ್ವಿಟರ್​ನಲ್ಲಿ ಕೂಡ ಇದನ್ನು ಮಕ್ಕಳಾಟಿಕೆ ಎಂದು ಹೇಳಲಾಯಿತು. ಮಾಧ್ಯಮದ ಒತ್ತಡ ಮತ್ತು ಜನರ ಒತ್ತಡದ ಬಳಿಕ ಒಂದು ವಾರದ ಬಳಿಕ ಪ್ರಕರಣ ದಾಖಲಿಸಲಾಯಿತು. ಇವರ ಮನಸ್ಸಿನಲ್ಲಿ ‌ಮಕ್ಕಳಾಟಿಕೆ ಎಂದು ಇರುವಾಗ ಯಾವ ರೀತಿ ತನಿಖೆ ಸಾಧ್ಯ? ಎಂದು ಪ್ರಶ್ನಿಸಿದರು.

ಡಿವೈಎಸ್ಪಿ ಹಂತದಲ್ಲಿ ತನಿಖೆ ನಡೆಯುತ್ತಿದೆ. ಒಳ್ಳೆಯ ಅಧಿಕಾರಿಗಳು ಪೊಲೀಸ್ ಇಲಾಖೆಯಲ್ಲಿ ಇದ್ದಾರೆ. ನಮಗೆ ಅದರ ಬಗ್ಗೆ ಸಂಶಯ ಇಲ್ಲ. ಆ ಇಲಾಖೆಯ ಅಧಿಕಾರಿಗಳ ಮೇಲೆ ಇವರು ಒತ್ತಡ ಹಾಕುವ ಬಗ್ಗೆ ನಮಗೆ ಗುಮಾನಿ ಇದೆ ಎಂದರು. ಈ ಪ್ರಕರಣದ ಬಗ್ಗೆ ತನಿಖೆಗೆ ಎಸ್​ಐಟಿ ತಂಡ ರಚಿಸಬೇಕು. ಇದನ್ನು ನಿವೃತ್ತ ನ್ಯಾಯಾಧೀಶರ ಕೆಳಗೆ ಇರುವಂತೆ ಮಾಡಬೇಕು. ವಿದ್ಯಾರ್ಥಿನಿಯರು ಮಾಡಿದ ವಿಡಿಯೋ ಬೇರೆಯವರ ಕೈಗೆ ಸೇರಿದೆ. ಆ ವಿಡಿಯೋವನ್ನು ಮೂರ್ನಾಲ್ಕು ಪುರುಷರಿಗೆ ಕಳುಹಿಸಿದ್ದಾರೆ ಎಂಬ ಮಾಹಿತಿ ಸಾರ್ವಜನಿಕರ ವಲಯದಲ್ಲಿ ಇದೆ. ಹಾಗಾಗಿ ಎಸ್​ಐಟಿ ತನಿಖೆ ಮಾಡಿ ನ್ಯಾಯ ಕೊಡಿಸಬೇಕು ಎಂದರು.

ಈ ವಿಚಾರದಲ್ಲಿ ಕರಾವಳಿ ಬಿಜೆಪಿ ಶಾಸಕರು ಶುಕ್ರವಾರ ರಾಜ್ಯಪಾಲರನ್ನು ಭೇಟಿಯಾಗಲಿದ್ದೇವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ನೇತೃತ್ವದಲ್ಲಿ ಭೇಟಿ ಆಗಲಿದ್ದಾರೆ. ರಾಜ್ಯಪಾಲರ ಮುಂದೆ ನಮ್ಮ ವಿಚಾರವನ್ನು ತಿಳಿಸಲಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ:ಉಡುಪಿ ವಿಡಿಯೋ ವಿವಾದ:  ಬಿಜೆಪಿ ಪ್ರತಿಭಟನೆ.. ಸಿಐಡಿ ತನಿಖೆಗೆ ಶ್ರೀನಿವಾಸ ಪೂಜಾರಿ ಆಗ್ರಹ

ABOUT THE AUTHOR

...view details