ಗುಂಡು ಹಾರಿಸಿ ಹೋಳಿ ಆಚರಣೆ; 450 ವರ್ಷಗಳಷ್ಟು ಹಳೆಯ ಪದ್ಧತಿ! ವಿಡಿಯೋ ನೋಡಿ - ಈಟಿವಿ ಭಾರತ ಕನ್ನಡ
ಉದಯಪುರ (ರಾಜಸ್ಥಾನ): ದೇಶದಾದ್ಯಂತ ಹೋಳಿ ಹಬ್ಬವನ್ನು ಪರಸ್ಪರ ಬಣ್ಣ ಎರಚಿ ಜನರು ಸಂಭ್ರಮಿಸಿದ್ದಾರೆ. ಆದರೆ ರಾಜಸ್ಥಾನದ ಉದಯಪುರದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿ ಮೆನಾರ್ ಎಂಬ ಪುಟ್ಟ ಗ್ರಾಮವಿದೆ. ಇಲ್ಲಿ ಪ್ರತಿ ವರ್ಷ ಹೋಳಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ಗ್ರಾಮದ ಜನರು ಮುಖಾಮುಖಿಯಾಗಿ ನಿಂತು ಗಾಳಿಯಲ್ಲಿ ಗುಂಡು ಹಾರಿಸಿ ಹೋಳಿಯನ್ನು ಸಂಭ್ರಮಿಸುತ್ತಾರೆ. ಬಣ್ಣಗಳ ಬದಲಾಗಿ ಕೋವಿ, ಬಂದೂಕು, ಕತ್ತಿಯ ಜೊತೆಗೆ ಪಟಾಕಿಗಳನ್ನೂ ಸಿಡಿಸಿ ಈ ಹಬ್ಬವನ್ನು ಆಚರಿಸುತ್ತಾರೆ.
ಮೆನಾರ್ ಗ್ರಾಮದಲ್ಲಿ ಹೋಳಿ ಹಬ್ಬವನ್ನು ರಾತ್ರಿ ಹೊತ್ತಿನಲ್ಲಿ ಆಚರಿಸಲಾಗುತ್ತದೆ. ಇಲ್ಲಿನ ಜನರು ಮುಖಾಮುಖಿಯಾಗಿ ನಿಂತು ಆಕಾಶಕ್ಕೆ ಫಿರಂಗಿಯಿಂದ ಗುಂಡು ಹಾರಿಸುತ್ತಾರೆ. ಜೊತೆಗೆ ಕತ್ತಿಗಳನ್ನು ಬೀಸುತ್ತಾರೆ. ಈ ಸಂಪ್ರದಾಯ ಸುಮಾರು 450 ವರ್ಷ ಹಿಂದಿನಿಂದ ನಡೆದುಕೊಂಡು ಬಂದಿದೆ. ಈ ಗ್ರಾಮದ ಜನರೊಂದಿಗೆ ಸುತ್ತಮುತ್ತಲಿನವರು ಕೂಡ ಹೋಳಿ ಆಚರಿಸಲು ಇಲ್ಲಿಗೆ ಬರುತ್ತಾರೆ. ಇಲ್ಲಿಯವರೆಗೆ ಈ ಗ್ರಾಮದಲ್ಲಿ ಹೋಳಿ ಆಡುವಾಗ ಯಾರಿಗೂ ಪ್ರಾಣಹಾನಿಯಾಗಿಲ್ಲ ಎಂಬುದು ವಿಶೇಷ.
ಇದನ್ನೂ ಓದಿ:ಹೋಳಿ ಪಾರ್ಟಿ ಆಯೋಜಿಸಲು ನಿಮಗೆ ಅಗತ್ಯವಿರುವ 6 ಅಗತ್ಯತೆಗಳು..! ಆರೋಗ್ಯದ ಬಗ್ಗೆ ಇರಲಿ ಎಚ್ಚರಿಕೆ!