ಗ್ರಾಹಕರ ಸೋಗಿನಲ್ಲಿ ಬಂದು ಕಿವಿಯೋಲೆ ಕದ್ದು ಪರಾರಿಯಾದ ಮಹಿಳೆಯರು.. ಸಿಸಿಟಿವಿಯಲ್ಲಿ ಕೃತ್ಯ ಸೆರೆ - news woth videos
ಬಸ್ತಿ (ಉತ್ತರಪ್ರದೇಶ): ಚಿನ್ನ ಖರೀದಿಸುವ ನೆಪದಲ್ಲಿ ಚಿನ್ನದಂಗಡಿಗೆ ಬಂದು ಕಿವಿಯೋಲೆಯನ್ನು ಕದ್ದು ಪರಾರಿಯಾಗಿರುವ ಘಟನೆ ಉತ್ತರಪ್ರದೇಶದ ಬಸ್ತಿಯ ವಾಲ್ಟರ್ ಗಂಜ್ ಪ್ರದೇಶದಲ್ಲಿ ನಡೆದಿದೆ. ಗ್ರಾಹಕರ ಸೋಗಿನಲ್ಲಿ ಚಿನ್ನದ ಅಂಗಡಿಗೆ ಬಂದ ಇಬ್ಬರು ಮಹಿಳೆಯರು ಚಿನ್ನದ ಓಲೆಗಳ ವಿನ್ಯಾಸಗಳನ್ನು ತೋರಿಸುವಂತೆ ನಾಟಕವಾಡಿ ಓಲೆಯನ್ನು ಕದ್ದು ವಿನ್ಯಾಸಗಳು ಯಾವುದು ಹಿಡಿಸಲಿಲ್ಲ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಗ್ರಾಹಕರಿಗೆ ತೋರಿಸಿದ ಎಲ್ಲಾ ಕಿವಿಯೋಲೆಗಳನ್ನು ಮತ್ತೆ ಜೋಡಿಸುವಾಗ ಒಂದು ಚಿನ್ನದ ಓಲೆ ಕಾಣೆಯಾಗಿದ್ದನ್ನು ಕಂಡು ಗಾಬರಿಯಾದ ಅಂಗಡಿಯ ಮಾಲೀಕರು ತಕ್ಷಣವೇ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾವನ್ನು ಪರಿಶೀಲಿಸಿದಾಗ, ಮಹಿಳೆಯರೇ ಕಳ್ಳತನ ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಈ ಬಗ್ಗೆ ಅಂಗಡಿ ಮಾಲೀಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:ವಿಮಾನ ತುರ್ತುನಿರ್ಗಮನ ಬಾಗಿಲು ತೆರೆದ ಪ್ರಕರಣ : ಬಿಜೆಪಿ ಸಂಸದನ ಕಾಳೆಲೆದ ಡಿಎಂಕೆ ಸಂಸದ ದಯಾನಿಧಿ ಮಾರನ್