ಕರ್ನಾಟಕ

karnataka

ರೈತರ ತೋಟಗಳಿಗೆ ಕನ್ನ ಹಾಕುತ್ತಿದ್ದ ಖದೀಮರ ಬಂಧನ : 12 ಟ್ರಾಕ್ಟರ್​ ವಶಕ್ಕೆ

ETV Bharat / videos

ಹೊಸಕೋಟೆ: ರೈತರ ತೋಟಗಳಿಗೆ ಕನ್ನ ಹಾಕುತ್ತಿದ್ದ ಖದೀಮರ ಬಂಧನ; 12 ಟ್ರಾಕ್ಟರ್​ ವಶಕ್ಕೆ - ಹೊಸಕೋಟೆ ಪೊಲೀಸರು ಕಾರ್ಯಾಚರಣೆ

By

Published : Jul 31, 2023, 12:28 PM IST

ಹೊಸಕೋಟೆ (ಬೆಂಗಳೂರು ಗ್ರಾಮಾಂತರ) :ರೈತರ ತೋಟಗಳಿಗೆ ಕನ್ನ ಹಾಕಿ ಟ್ರ್ಯಾಕ್ಟರ್​​ಗಳನ್ನು ಕದಿಯುತ್ತಿದ್ದ ಖದೀಮರನ್ನು ಹೊಸಕೋಟೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ಕೋಲಾರ ಮೂಲದ ಶಿವಾನಂದ್​ ಮತ್ತು ಆನಂದ್​ ಎಂದು ಗುರುತಿಸಲಾಗಿದೆ. ಬಂಧಿತರು ರಾತ್ರಿ ವೇಳೆ ಜಮೀನಿಗೆ ನುಗ್ಗಿ ಟೊಮೆಟೊ, ತರಕಾರಿ ಹಾಗೂ ಟ್ರಾಕ್ಟರ್​​ಗಳನ್ನು ಕದಿಯುತ್ತಿದ್ದರು.

ಬಂಧಿತ ಆರೋಪಿಗಳು ಚಿಂತಾಮಣಿ, ಕೋಲಾರ, ಹೊಸಕೋಟೆ ಸುತ್ತಮುತ್ತ ಕಳ್ಳತನ ಮಾಡಿದ್ದರು. ಟೊಮೆಟೊ ಬೆಲೆ‌ ಗಗನಕ್ಕೇರಿರುವ ಹಿನ್ನೆಲೆ‌ಯಲ್ಲಿ ಖದೀಮರು ಟೊಮೆಟೊ ಬೆಳೆ ಟಾರ್ಗೆಟ್ ಮಾಡಿದ್ದರು. ಇದರ ಜೊತೆಗೆ ರೈತರ ಟ್ರಾಕ್ಟರ್​ಗಳನ್ನು ಕದ್ದು ಪರಾರಿಯಾಗುತ್ತಿದ್ದರು. ಬಳಿಕ ಅವುಗಳನ್ನು ಮಾರಾಟ ಮಾಡಿ ಹಣ ಗಳಿಸುತ್ತಿದ್ದರು.  

ಈ ಸಂಬಂಧ  ದೂರು ದಾಖಲಾದ ಬೆನ್ನಲ್ಲೇ ಹೊಸಕೋಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ವಿವಿಧೆಡೆ ಕದ್ದಿರುವ 12 ಟ್ರಾಕ್ಟರ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.

ಇದನ್ನೂ ಓದಿ :Tomato Truck missing: ಕೋಲಾರದಿಂದ ಜೈಪುರಕ್ಕೆ 21 ಲಕ್ಷ ರೂಪಾಯಿ ಮೌಲ್ಯದ ಟೊಮೆಟೊ ಸಾಗಿಸುತ್ತಿದ್ದ ಟ್ರಕ್ ನಾಪತ್ತೆ!

ABOUT THE AUTHOR

...view details