ಕರ್ನಾಟಕ

karnataka

ETV Bharat / videos

ಬೈಕ್ ಸ್ಟಂಟ್ ಮಾಡಲು ಹೋಗಿ ಹಾರಿ ಬಿದ್ದ ಸವಾರರು.. ವಿಡಿಯೋ ವೈರಲ್ - Royal enfield skid

By

Published : Jan 24, 2023, 10:42 PM IST

Updated : Feb 3, 2023, 8:39 PM IST

ವಿಜಯನಗರ : ಬೈಕ್ ಸ್ಟಂಟ್ ಮಾಡಲು ಹೋಗಿ ಬೈಕ್ ಸವಾರರಿಬ್ಬರು ಹಾರಿ ಬಿದ್ದ ಘಟನೆ ಹೊಸಪೇಟೆಯ ಚಿತ್ತವಾಡಿಗಿಯ ಗೃಹ ರಕ್ಷಕ ದಳದ ಕಚೇರಿ ಬಳಿಯ ಬೈಪಾಸ್​ನಲ್ಲಿ ನಡೆದಿದೆ. ರಾಯಲ್ ಎನ್​ಫೀಲ್ಡ್ ಬೈಕ್ ಚಲಾಯಿಸುತ್ತಿದ್ದ ಬೈಕ್ ಸವಾರರು ಹಾರಿಬಿದ್ದಿದ್ದಾರೆ. 

ಸ್ಪೀಡಾಗಿ ಡ್ರೈವ್ ಮಾಡುತ್ತ ಬೈಕ್ ಸ್ಟಂಟ್ ಮಾಡಲು ಹೋದ ಬೈಕ್ ಸವಾರ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾನೆ. ಬೈಕ್ ಅತಿ ವೇಗದಲ್ಲಿ ಇದ್ದಿದ್ದರಿಂದಾಗಿ ನಿಯಂತ್ರಣಕ್ಕೆ ಸಿಗದೆ ಅಪಘಾತ ಆಗಿದೆ. ರಾಯಲ್ ಎನ್​ಫೀಲ್ಡ್ ಅನ್ನು ಸ್ಪೀಡ್ ಆಗಿ ಡ್ರೈವಿಂಗ್ ಮಾಡುವುದನ್ನು ಮತ್ತೊಬ್ಬ ಬೈಕ್ ಸವಾರ ವಿಡಿಯೋ ಮಾಡಿದ್ದು, ಅಪಘಾತದ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.

ವಿರುಪಾಕ್ಷ ಹಾಗೂ ಮಲ್ಲಿಕಾರ್ಜುನ ಬೈಕ್​ನಿಂದ ಹಾರಿಬಿದ್ದ ಸವಾರರು. ಇಬ್ಬರು ಸವಾರರಿಗೆ ಕಾಲು, ತಲೆಗೆ ಗಂಭೀರ ಗಾಯ ಆಗಿದೆ. ಅಪಘಾತಕ್ಕೀಡಾದ ರಾಯಲ್ ಎನ್​ಫೀಲ್ಡ್ ಬೈಕ್ ಅನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ :ದೇವಸ್ಥಾನದ ಆನೆಗಾಗಿ 8.40 ಲಕ್ಷ ರೂ ವೆಚ್ಚದ ಈಜುಕೊಳ ನಿರ್ಮಾಣ..

Last Updated : Feb 3, 2023, 8:39 PM IST

ABOUT THE AUTHOR

...view details