ಕೊಟ್ಟಿಗೆಗೆ ಬೆಂಕಿ ಬಿದ್ದು ಕಣ್ಣೆದುರೇ ಜೋಡೆತ್ತು ಸಾವು, ರೈತನ ಗೋಳಾಟ - ಕೊಳ್ಳೇಗಾಲ ಅಗ್ನಿಶಾಮಕ ಸಿಬ್ಬಂದಿ
ಚಾಮರಾಜನಗರ: ಭತ್ತದ ಮೆದೆಗೆ ಹೊತ್ತಿಕೊಂಡ ಬೆಂಕಿ ಬಳಿಕ ಕೊಟ್ಟಿಗೆಗೂ ವ್ಯಾಪಿಸಿ ಕಟ್ಟಿ ಹಾಕಿದ್ದ ಜೋಡೆತ್ತು ಸುಟ್ಟು ಕರಕಲಾದ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ವೈ.ಕೆ.ಮೋಳೆ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ. ವೈ ಕೆ ಮೋಳೆ ಗ್ರಾಮದ ರೈತ ಸಿದ್ದರಾಜು ಎಂಬುವರ ಎತ್ತುಗಳು ಸಾವಿಗೀಡಾಗಿವೆ. ಇತ್ತೀಚೆಗಷ್ಟೇ 1.20 ಲಕ್ಷ ರೂ. ಕೊಟ್ಟು ಹೊಸ ಎತ್ತುಗಳನ್ನು ಖರೀದಿಸಿದ್ದರು. ಕಣ್ಣೆದುರೇ ಎತ್ತುಗಳು ಸುಟ್ಟು ಹೋಗುತ್ತಿರುವುದನ್ನು ಕಂಡ ರೈತನ ಗೋಳಾಟ ಹೇಳತೀರದಂತಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕೊಳ್ಳೇಗಾಲ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಯಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Last Updated : Feb 3, 2023, 8:38 PM IST