ಚಾರ್ಮಾಡಿ ಘಾಟ್ನಲ್ಲಿ ಎರಡು ಬಸ್ಗಳ ನಡುವೆ ಮುಖಾಮುಖಿ ಡಿಕ್ಕಿ: 10 ಕಿ ಮೀಗೂ ಹೆಚ್ಚು ದೂರ ಟ್ರಾಫಿಕ್ ಜಾಮ್ - ಟ್ರಾಫಿಕ್ ಜಾಮ್ ಕ್ಲಿಯರ್
ಚಿಕ್ಕಮಗಳೂರು :ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ, ಬಣಕಲ್ ಭಾಗದಲ್ಲಿ ನಿತ್ಯ ನಿರಂತರ ಧಾರಾಕಾರ ಮಳೆ ಸುರಿಯುತ್ತಿದ್ದು, ಹತ್ತು ಹಲವಾರು ಅವಘಡಗಳು ಸೃಷ್ಟಿಯಾಗಿದೆ. ಇಂದು ಸರ್ಕಾರಿ ಬಸ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ನಡೆದಿದೆ.
ಸರ್ಕಾರಿ ಬಸ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಎರಡೂ ಬಸ್ಗಳ ಡ್ರೈವರ್ಗಳ ಕಾಲಿಗೆ ತೀವ್ರ ಗಾಯಗಳಾಗಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 2 ಬಸ್ಗಳಲ್ಲಿ 80 ಕ್ಕೂ ಹೆಚ್ಚು ಜನ ಪ್ರಯಾಣಿಕರು ಇದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಈ ಅಪಘಾತಕ್ಕೆ ರಸ್ತೆ ಕಾಮಗಾರಿಯೇ ಕಾರಣ ಎಂದು ಹೇಳಲಾಗಿದೆ.
2019 ರಲ್ಲಿ ಕುಸಿದಿದ್ದ ಕಾಮಗಾರಿ ಇನ್ನೂ ಮುಗಿಯದೇ ಇರದ ಕಾರಣ ಈ ಅಪಘಾತ ಸಂಭವಿಸಿದ್ದು, ಚಾರ್ಮಾಡಿಯಲ್ಲಿ ರಸ್ತೆ ಕಾಮಗಾರಿಯನ್ನ ಕೂಡಲೇ ಮುಗಿಸುವಂತೆ ಆಗ್ರಹಿಸಲಾಗಿದೆ. ಹಾಗೂ ಚಾರ್ಮಾಡಿ ಘಾಟಿಯ ಮಂಜು ಕೂಡ ಕಾರಣ ಎನ್ನಲಾಗಿದೆ. ಚಾರ್ಮಾಡಿಯಲ್ಲಿ ಕವಿದಿರೋ ಭಾರೀ ಪ್ರಮಾಣದ ಮಂಜು ಅಡಿ ದೂರದಲ್ಲಿ ಇರುವವರು ಕಾಣದಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಅಪಘಾತದಿಂದ ಕಿ.ಮೀ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದ್ದು, ಘಾಟಿಯಲ್ಲಿ ಸಿಲುಕಿ ವಾಹನ ಸವಾರರು ಪರದಾಡುವಂತೆ ಆಗಿದೆ. ಇನ್ನು ಕೆಲ ಪ್ರಯಾಣಿಕರು 10 ಕಿ.ಮೀ ನಡೆದು ಕೊಟ್ಟಿಗೆಹಾರ ತಲುಪಿದ್ದಾರೆ. ಬಣಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಟ್ರಾಫಿಕ್ ಜಾಮ್ ಕ್ಲಿಯರ್ ಮಾಡುವ ಕೆಲಸ ಮಾಡುತ್ತಿದ್ದು, ರಸ್ತೆ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿವೆ.
ಇದನ್ನೂ ಓದಿ:ಎಲಿಫೆಂಟ್ ಇನ್ ಚಾರ್ಮಾಡಿ ಘಾಟ್: ಜೀವ ಭಯದಲ್ಲೇ ಬದುಕುತ್ತಿರುವ ಸಾರ್ವಜನಿಕರು