ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿ: ಮುಳುಗಡೆಯಾದ ಸುಕ್ಷೇತ್ರ ಉಕ್ಕಡಗಾತ್ರಿಯ ಸ್ನಾನಘಟ್ಟಗಳು - ಮುಳುಗಡೆಯಾದ ಸುಕ್ಷೇತ್ರ ಉಕ್ಕಡಗಾತ್ರಿಯ ಸ್ನಾನಘಟ್ಟಗಳು
ದಾವಣಗೆರೆ:ರಾಜ್ಯದಲ್ಲಿ ಮುಂಗಾರು ಅಭಾವದಿಂದವಾಡಿಕೆಯಂತೆ ಮಳೆಯಾಗದೇ ಇದ್ದಿದ್ದರಿಂದಬತ್ತಿಹೋಗಿದ್ದ ತುಂಗಭದ್ರಾ ನದಿಗೆ ಈಗ ಜೀವಕಳೆ ಬಂದಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ತುಂಗಭದ್ರಾ ನದಿಗೆ ಒಳಹರಿವು ಹೆಚ್ಚಾಗಿದೆ. ಶಿವಮೊಗ್ಗ ಜಿಲ್ಲೆಯ ತುಂಗಾ ಡ್ಯಾಂ ತುಂಬಿದ್ದರಿಂದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಹೀಗಾಗಿ ಹರಿಹರ ತಾಲೂಕಿನ ಮಲೇಬೆನ್ನೂರು ಹೋಬಳಿ ವ್ಯಾಪ್ತಿಯ ತುಂಗಭದ್ರಾ ನದಿದಂಡೆಯ ಗ್ರಾಮ ಸುಕ್ಷೇತ್ರ ಉಕ್ಕಡಗಾತ್ರಿಯ ದೇವಸ್ಥಾನದ ಸ್ನಾನದ ಘಟ್ಟಗಳು ಮುಳುಗಿವೆ.
ನದಿ ಪಾತ್ರದಲ್ಲಿ ಭಕ್ತಾದಿಗಳು ಎಚ್ಚರಿಕೆಯಿಂದ ಇರುವಂತೆ ದೇವಸ್ಥಾನದ ಆಡಳಿತ ಮಂಡಳಿ ಭಕ್ತರಿಗೆ ಮನವಿ ಮಾಡಿದೆ. ಸದ್ಯ ತುಂಗಾ ನದಿಯಿಂದ ಮಾತ್ರ ನೀರಿನ್ನು ಹೊರಬಿಡಲಾಗಿದ್ದು, ಇನ್ನು ಭದ್ರಾ ಜಲಾಶಯ ತುಂಬಿದರೆ ಭಾರೀ ಪ್ರಮಾಣದಲ್ಲಿ ಭದ್ರಾ ನದಿಗೆ ನೀರು ಹರಿದು ಬರಲಿದೆ. ಇದರಿಂದ ದಾವಣಗೆರೆ ಭಾಗದ ತುಂಗಭದ್ರಾ ನದಿಯ ನೀರಿನ ಮಟ್ಟ ಇನ್ನು ಹೆಚ್ಚಾಗಲಿದ್ದು, ನದಿ ಪಾತ್ರದಲ್ಲಿರುವ ವಸತಿ ಪ್ರದೇಶಗಳಿಗೂ ನೀರು ನುಗ್ಗುವ ಸಾಧ್ಯತೆ ಇದೆ. ಹೀಗಾಗಿ ತಾಲೂಕು ಆಡಳಿತ ಈ ಸಂಬಂಧ ಮುಂಜಾಗ್ರತೆ ವಹಿಸಿದೆ.
ಇದನ್ನೂ ಓದಿ:ರಾಜ್ಯದ ಅತಿ ಚಿಕ್ಕ ತುಂಗಾ ಅಣೆಕಟ್ಟು ಭರ್ತಿ: 7,500 ಕ್ಯೂಸೆಕ್ ನೀರು ನದಿಗೆ ಬಿಡುಗಡೆ