ಕರ್ನಾಟಕ

karnataka

ಆ್ಯಂಬುಲೆನ್ಸ್​ನಲ್ಲಿ ಬಂದು ಮತ ಚಲಾಯಿಸಿದ ವ್ಯಕ್ತಿ

ETV Bharat / videos

ಆ್ಯಂಬುಲೆನ್ಸ್​ನಲ್ಲಿ ಬಂದು ಸ್ಟ್ರೆಚರ್‌ನಲ್ಲಿ ಸಾಗಿ ಮತ ಚಲಾಯಿಸಿದ ವ್ಯಕ್ತಿ- ವಿಡಿಯೋ - ಕರ್ನಾಟಕ ಚುನಾವಣೆ 2023

By

Published : May 10, 2023, 2:30 PM IST

ತುಮಕೂರು:ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಆ್ಯಂಬುಲೆನ್ಸ್​ನಲ್ಲಿ ಬಂದು ಸ್ಟ್ರೆಚರ್‌ ಮೂಲಕ ಸಾಗಿ ಮತ ಚಲಾವಣೆ ಮಾಡಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಂಪಗಿ ರಾಮು ಎಂಬವರು ಕಳೆದ ನಾಲ್ಕು ತಿಂಗಳಿನಿಂದ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಇಂದು ಆ್ಯಂಬುಲೆನ್ಸ್​ ಮೂಲಕ ಆಗಮಿಸಿ ತುಮಕೂರು ನಗರದ ರೈಲ್ವೆ ಸ್ಟೇಷನ್ ರಸ್ತೆಯ ಮತಗಟ್ಟೆ ಸಂಖ್ಯೆ 148ರಲ್ಲಿ ವೋಟ್‌ ಮಾಡಿದರು.

ಇದನ್ನೂ ಓದಿ:ಮತ ಚಲಾವಣೆಗೆ ಬಂದ ವೃದ್ಧೆ ಸಾವು.. ವೋಟಿಂಗ್ ಬಳಿಕ​ ಹೃದಯಾಘಾತದಿಂದ ವ್ಯಕ್ತಿ ನಿಧನ

ಪತ್ನಿ ಜತೆಯಲ್ಲಿ ಬಂದ ಸಂಪಗಿ ರಾಮು ಚುನಾವಣಾ ಸಿಬ್ಬಂದಿಯ ನೆರವಿನಿಂದ ಮತ ಚಲಾಯಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಸಂಪಗಿ ರಾಮು ಅವರ ಪತ್ನಿ ಲಕ್ಷ್ಮಿ, "ನಾವು ಚಲಾಯಿಸುವಂತಹ ಪ್ರತಿಯೊಂದು ಮತ ಕೂಡ ಅಮೂಲ್ಯವಾದುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತಕ್ಕೆ ಅತ್ಯುನ್ನತ ಸ್ಥಾನವಿದೆ. ಇದನ್ನು ಮನಗಂಡು ಪತಿಯೊಂದಿಗೆ ಬಂದು ಮತ ಚಲಾವಣೆ ಮಾಡಿದ್ದೇನೆ" ಎಂದರು. 

ಇದನ್ನೂ ಓದಿ:ತೋರಿಸಿದ ಚಿಹ್ನೆಗೆ ಅಧಿಕಾರಿಗಳು ಮತ ಹಾಕಿಲ್ಲ ಎಂದು ಆರೋಪಿಸಿ ಧರಣಿ ಕುಳಿತ 85ರ ವೃದ್ಧೆ!

ABOUT THE AUTHOR

...view details