ಕರ್ನಾಟಕ

karnataka

ಶಿಮ್ಲಾ ಜಿಲ್ಲೆಯ ಥಿಯೋಗ್‌ನಲ್ಲಿ ಟ್ರಕ್ ಪಲ್ಟಿ

ETV Bharat / videos

Video: ರಸ್ತೆಯ ಮೇಲೆ ಟ್ರಕ್ ಪಲ್ಟಿ: ದಂಪತಿ ಸಾವು - ಮೂರು ಕಾರು, ಒಂದು ಬೈಕ್​ ಜಖಂ - ಅಪಘಾತದ ಲೈವ್ ವಿಡಿಯೋ

By

Published : Aug 9, 2023, 8:41 AM IST

ಶಿಮ್ಲಾ( ಹಿಮಾಚಲ ಪ್ರದೇಶ) : ಶಿಮ್ಲಾ ಜಿಲ್ಲೆಯ ಥಿಯೋಗ್‌ನಲ್ಲಿ ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ಭೀಕರ ರಸ್ತೆ ಅಪಘಾತವೊಂದು ನಡೆದಿದೆ. ದುರಂತದಲ್ಲಿ ಮಹಿಳೆ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಅಪಘಾತದ ಲೈವ್ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದ್ದು, ಅವಘಡದಲ್ಲಿ ಮೂರು ಕಾರುಗಳು ಹಾಗೂ ಒಂದು ದ್ವಿಚಕ್ರ ವಾಹನ ಜಖಂಗೊಂಡಿದೆ.

ಮಾಹಿತಿಯ ಪ್ರಕಾರ, ಥಿಯೋಗ್‌ನಲ್ಲಿ ಸೋಲನ್ ಕಡೆಗೆ ಹೋಗುತ್ತಿದ್ದ ಸೇಬು ತುಂಬಿದ ಟ್ರಕ್ ಏಕಾಏಕಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ಪಲ್ಟಿಯಾಗಿದೆ. ಈ ವೇಳೆ ಪಕ್ಕಕ್ಕೆ ಚಲಿಸುತ್ತಿದ್ದ 3 ಕಾರುಗಳು ಮತ್ತು ಬೈಕ್​ ಮೇಲೆ ಬಂದು ಬಿದ್ದಿದೆ. ಪರಿಣಾಮ ಮಾರುತಿ ಕಾರಿನಲ್ಲಿ ಸಂಚರಿಸುತ್ತಿದ್ದ ಜುಬ್ಬಲ್ ನಿವಾಸಿಗಳಾದ ಮೋಹನ್ ಸಿಂಗ್ ನೇಗಿ (52 ) ಮತ್ತು ಅವರ ಪತ್ನಿ ಆಶಾ ನೇಗಿ (43) ಮೃತಪಟ್ಟಿದ್ದಾರೆ. ಶಿಮ್ಲಾ ಪೊಲೀಸರು ಮೃತದೇಹಗಳನ್ನು ಸಿವಿಲ್ ಆಸ್ಪತ್ರೆ ಥಿಯೋಗ್‌ಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಅಪಘಾತದ ಬಗ್ಗೆ ಮೃತರ ಸಂಬಂಧಿಕರಿಗೆ ತಿಳಿಸಲಾಗಿದೆ ಎಂದು ಎಸ್‌ಡಿಎಂ ಮುಖೇಶ್ ಶರ್ಮಾ ತಿಳಿಸಿದ್ದಾರೆ.

ಅಪಘಾತದ ಲೈವ್ ವಿಡಿಯೋ : ಇನ್ನೊಂದೆಡೆ, ಈ ಹೃದಯ ವಿದ್ರಾವಕ ಅಪಘಾತದ ವಿಡಿಯೋ ಲೈವ್ ರೆಕಾರ್ಡ್ ಆಗಿದೆ. ಘಟನೆ ಜರುಗಿದ ಒಂದು ಗಂಟೆಯ ಬಳಿಕ 2 ಜೆಸಿಬಿ ಯಂತ್ರಗಳ ಸಹಾಯದಿಂದ ಟ್ರಕ್ ಅನ್ನು ರಸ್ತೆ ಮೇಲಿಂದ ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ಡಿಎಸ್​ಪಿ ಥಿಯೋಗ್ ಸಿದ್ಧಾರ್ಥ್ ಶರ್ಮಾ, ಎಸ್‌ಡಿಎಂ ದಿಯೋಗ್ ಮುಖೇಶ್ ಶರ್ಮಾ, ತಹಶೀಲ್ದಾರ್ ವಿವೇಕ್ ನೇಗಿ ಉಪಸ್ಥಿತರಿದ್ದರು.

ಇದನ್ನೂ ಓದಿ :ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಕೆಎಸ್​ಆರ್​ಟಿಸಿ ಬಸ್​: 28 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ABOUT THE AUTHOR

...view details