ರಸ್ತೆಯಲ್ಲಿ ಸಿಲುಕಿದ್ದ ಟ್ರಕ್ ಉರುಳಿ ಕಂದಕಕ್ಕೆ ಬಿತ್ತು: ವಿಡಿಯೋ - ಟ್ರಕ್ ಉರುಳಿ ಕಂದಕಕ್ಕೆ ಬಿತ್ತು
ಪೌರಿ (ಉತ್ತರಾಖಂಡ):ಮಣ್ಣಿನ ರಸ್ತೆಯಲ್ಲಿ ಸಿಲುಕಿದ್ದ ಟ್ರಕ್ವೊಂದು ಪಕ್ಕದ ಕಂದಕಕ್ಕೆ ಉರುಳಿಬಿದ್ದ ಘಟನೆ ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವತಾಶ್ ಚಾಲಕ ಮತ್ತು ಹೆಲ್ಪರ್ ಟ್ರಕ್ನಿಂದ ಇಳಿದು ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ರಸ್ತೆಯಿಂದ ಕಂದಕಕ್ಕೆ ವಾಹನ ಪಲ್ಟಿ ಹೊಡೆಯುತ್ತಿರುವ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಲ್ಲಿನ ಬೆಜ್ವಾನಿ ಗ್ರಾಮದ ಸಬ್ದರ್ಖಾಲ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ರಸ್ತೆಯು ಅತ್ಯಂತ ಕಳಪೆ ಗುಣಮಟ್ಟದ್ದಾಗಿದ್ದು, ಟ್ರಕ್ ಸಂಚರಿಸುತ್ತಿರಬೇಕಾದರೆ ಹಿಂಬದಿಯ ಚಕ್ರ ರಸ್ತೆಯಲ್ಲಿ ಸಿಲುಕಿಕೊಂಡಿದೆ. ನಂತರ ಕೆಲ ಹೊತ್ತಿನ ನಂತರ ಲಾರಿಯ ಭಾರದಿಂದ ಮತ್ತಷ್ಟು ಕುಸಿದು ಹೋಗಿದೆ. ಇದರಿಂದ ಕ್ಷಣ, ಕಣಕ್ಕೂ ಟ್ರಕ್ ಕುಸಿಯುತ್ತಲೇ ಪಕ್ಕದ ಕಂದಕಕ್ಕೆ ಉರುಳಿ ಬಿದ್ದಿದೆ.
ಮತ್ತೊಂದೆಡೆ, ಟ್ರಕ್ ವಿಕಾಸ್ ರಾವತ್ ಎಂಬುವವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಗೈರಸೈನ್ ನಿವಾಸಿ ಜಗದೀಶ್ ಅಲಿಯಾಸ್ ಜಾಗಿ ಎಂಬವರು ಟ್ರಕ್ಅನ್ನು ಚಲಾಯಿಸುತ್ತಿದ್ದರು. ಅಲ್ಲದೇ, ಟ್ರಕ್ನಲ್ಲಿ ಹೆಲ್ಪರ್ ಕೂಡ ಇದ್ದ. ಆದರೆ, ರಸ್ತೆಯಲ್ಲಿ ಚಕ್ರ ಸಿಲುಕಿದ ತಕ್ಷಣವೇ ಇಬ್ಬರು ಕೂಡ ಎಚ್ಚೆತ್ತುಕೊಂಡು ಕೆಳಗೆ ಇಳಿದಿದ್ದಾರೆ. ಇದರಿಂದ ಪ್ರಾಣ ಹಾನಿ ತಪ್ಪಿದಂತಾಗಿದೆ.
ಇದನ್ನೂ ಓದಿ:ಮೂರು ಪ್ರತ್ಯೇಕ ರಸ್ತೆ ಅಪಘಾತ.. 14 ಜನರ ದುರ್ಮರಣ