ವಿಜಯನಗರ: ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಟ್ರಕ್; ಚಾಲಕ ಪಾರು - a truck caught in an accidental fire at kudligi
ವಿಜಯನಗರ : ಆಕಸ್ಮಿಕ ಬೆಂಕಿಗೆ ಟ್ರಕ್ನಲ್ಲಿದ್ದ ಪಾರ್ಸೆಲ್ ಬಾಕ್ಸ್ಗಳು ಹೊತ್ತಿ ಉರಿದ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಎಂಬಿ ಅಯ್ಯನಹಳ್ಳಿ ಬಳಿ ಇಂದು ನಡೆದಿದೆ. ಹೊಸಪೇಟೆಯಿಂದ ಬೆಂಗಳೂರು ಮಾರ್ಗವಾಗಿ ಹೊರಟಿದ್ದ ಟ್ರಕ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪಾರ್ಸೆಲ್ ಬಾಕ್ಸ್ಗಳು ಸುಟ್ಟು ಭಸ್ಮವಾಗಿವೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಾನಾಹೊಸಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟ್ರಕ್ನಲ್ಲಿದ್ದ ಶೇ.70 ರಷ್ಟು ಸಾಮಗ್ರಿ ಹಾಗೂ ವಾಹನದ ಬಿಡಿಭಾಗಗಳು ಸುಟ್ಟು ಕರಕಲಾಗಿವೆ. ಖಾಸಗಿ ಕಂಪನಿಗೆ ಸೇರಿದ ವಾಹನ ಇದಾಗಿದ್ದು, ವಿವಿಧ ರೀತಿಯ ಜನಬಳಕೆ ಸಾಮಗ್ರಿ ಹೊತ್ತು ಬೆಂಗಳೂರು ಕಡೆಗೆ ಹೋಗುತ್ತಿತ್ತು. ನಸುಕಿನ ಜಾವ 5 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಕೂಡ್ಲಿಗಿ ತಾಲೂಕಿನ ಎಂ.ಬಿ ಅಯ್ಯನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಯರ್ಗಳ ಘರ್ಷಣೆಯಿಂದ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಇಡೀ ಲಾರಿ ಆವರಿಸಿತು. ತಕ್ಷಣ ಲಾರಿ ನಿಲ್ಲಿಸಿ ಚಾಲಕ ಕೆಳಗಿಳಿದಿದ್ದಾನೆ. ಕೂಡ್ಲಿಗಿ ಅಗ್ನಿಶಾಮಕ ದಳದ ಎಸ್.ಎಂ ಪಾಷ ನೇತೃತ್ವದಲ್ಲಿ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.