5.26 ಕೋಟಿ ಮೌಲ್ಯದ ಡ್ರಗ್ಸ್ ನಾಶಪಡಿಸಿದ ತ್ರಿಪುರ ಪೊಲೀಸರು - ಈಟಿವಿ ಭಾರತ ಕನ್ನಡ
ಅಗರ್ತಲಾ(ತ್ರಿಪುರ) : ಡಿಐಜಿಪಿ ನೇತೃತ್ವದ ತ್ರಿಪುರಾ ರಾಜ್ಯ ಮಟ್ಟದ ಮಾದಕ ದ್ರವ್ಯ ವಿಲೇವಾರಿ ಸಮಿತಿಯು ರಾಜ್ಯಾದ್ಯಂತ ವಶಪಡಿಸಿಕೊಂಡ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ನಾಶಪಡಿಸಿದೆ. ಒಟ್ಟು 9123 ಕೆಜಿ ಒಣ ಗಾಂಜಾ, 21985 ನಿಷೇಧಿತ ಕೆಮ್ಮಿನ ಸಿರಪ್ ಬಾಟಲಿಗಳು,42402 ಯಾಬಾ ಮಾತ್ರೆಗಳು ಮತ್ತು 78.4 ಗ್ರಾಂ ಹೆರಾಯಿನ್ ಅನ್ನು ನಾಶಪಡಿಸಲಾಗಿದೆ. ನಾಶಪಡಿಸಿದ ಮಾದಕ ವಸ್ತುಗಳ ಅಂದಾಜು ಮೌಲ್ಯ 5.26 ಕೋಟಿ ರೂ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಮಾದಕ ದ್ರವ್ಯ ನಿಗ್ರಹ ವಿಭಾಗದ ಡಿಎಸ್‌ಪಿ ತರುಣ್ ದೆಬ್ಬರ್ಮಾ , ದೇಶಾದ್ಯಂತ ಕೇಂದ್ರ ಸರ್ಕಾರದ ನಿರ್ದಿಷ್ಟ ಸೂಚನೆಗಳನ್ನು ಅನುಸರಿಸಿ ಇಂದು ವಶಪಡಿಸಿಕೊಂಡ ಮಾದಕ ದ್ರವ್ಯಗಳನ್ನು ನಾಶಪಡಿಸಲಾಗುತ್ತಿದೆ ಎಂದು ಹೇಳಿದರು.
Last Updated : Feb 3, 2023, 8:29 PM IST