Watch... ಪುರಿ ಕಡಲತೀರದಲ್ಲಿ ಅದ್ಭುತವಾಗಿ ಅರಳಿ ನಿಂತ ನೇತಾಜಿ ಮೂರ್ತಿ
ಪುರಿ (ಒಡಿಶಾ):ತಮ್ಮ ಕ್ರಾಂತಿಕಾರಿ ಮಾತುಗಳಿಂದಲ್ಲೇ ಯುವಜನರಲ್ಲಿ ಸ್ವಾತಂತ್ರ್ಯದ ಕಿಡಿ ಹಚ್ಚಿದ ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ದೇಶಕ್ಕೆ ದೇಶವೇ ಇಂದು ಪರಾಕ್ರಮ ದಿನವನ್ನಾಗಿ ಆಚರಿಸುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿ ಅವರ ಪಾತ್ರ, ಜೀವನ, ತ್ಯಾಗ ಮತ್ತು ಅವರು ತೆಗೆದುಕೊಂಡ ನಿರ್ಧಾರ ನಮ್ಮೆಲ್ಲರಿಗೂ ಪ್ರೇರಣೆ. ಇಂದು ಜವನರಿ 23, ನೇತಾಜೀ ಅವರ 125 ನೇ ಜನ್ಮ ದಿನ ನಿಮಿತ್ತ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್, ನೇತಾಜಿ ಮರಳು ಶಿಲ್ಪವನ್ನು ನಿರ್ಮಿಸಿ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ.
ಸುದರ್ಶನ್ ಪಟ್ನಾಯಕ್ ಅವರು ಬರೋಬ್ಬರಿ 6 ಟನ್ ಮರಳು ಹಾಗೂ 450 ಸ್ಟೀಲ್ ಬಟ್ಟಲು ಬಳಸಿಕೊಂಡು ಮರಳು ಶಿಲ್ಪ ನಿರ್ಮಿಸಿದ್ದಾರೆ. ನೇತಾಜಿ ಅವರ ಜೈ ಹಿಂದ್ ಸಂದೇಶವನ್ನು ಪ್ರತಿಬಿಂಬಿಸುವ ರೀತಿಯಲ್ಲಿ 7 ಅಡಿ ಎತ್ತರದ ಮರಳಿನ ಶಿಲ್ಪ ರಚಿಸಿ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ :ಧ್ವಜ ರಕ್ಷಣೆಗೆ ಪ್ರಾಣವನ್ನೇ ಪಣಕ್ಕಿಟ್ಟ ಅಗ್ನಿಶಾಮಕ ಸಿಬ್ಬಂದಿ: ದೇಶಪ್ರೇಮಕ್ಕೆ ತಲೆ ಬಾಗಿದ ಜನ