ಕರ್ನಾಟಕ

karnataka

105 ಪ್ರಾಚೀನ ಕಲಾಕೃತಿಗಳನ್ನು ಭಾರತಕ್ಕೆ ಮರಳಿಸಿದ ಅಮೆರಿಕ

ETV Bharat / videos

105 ಅತ್ಯಮೂಲ್ಯ ಪ್ರಾಚೀನ ಕಲಾಕೃತಿಗಳನ್ನು ಭಾರತಕ್ಕೆ ಮರಳಿಸಿದ ಅಮೆರಿಕ: ವಿಡಿಯೋ - ಅಮೆರಿಕಾದ ಭಾರತೀಯ ರಾಯಭಾರಿ ತರಂಜಿತ್​ ಸಿಂಗ್​ ಸಂಧು

By

Published : Jul 18, 2023, 7:28 AM IST

ನ್ಯೂಯಾರ್ಕ್​ (ಅಮೆರಿಕ):ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಪ್ರವಾಸದ ನಂತರದ ಮಹತ್ವದ ಬೆಳವಣಿಗೆಯಲ್ಲಿ, ಅಮೆರಿಕ ಅಧಿಕಾರಿಗಳು ಭಾರತಕ್ಕೆ ಸೇರಿದ ಅತ್ಯಮೂಲ್ಯ 105 ಪ್ರಾಚೀನ ಕಲಾಕೃತಿಗಳನ್ನು ಮರಳಿಸಿದ್ದಾರೆ. ಇವು ಕ್ರಿ.ಶ 2, 3ನೇ ಶತಮಾನದಿಂದ ಹಿಡಿದು 18- 19ನೇ ಶತಮಾನದ ಅವಧಿಯ ಕಲಾಕೃತಿಗಳಾಗಿವೆ. ಈ ಪೈಕಿ ಕೆಲವು ಕಲಾಕೃತಿಗಳನ್ನು ನ್ಯೂಯಾರ್ಕ್‌ನ ಭಾರತೀಯ ಕಾನ್ಸುಲೇಟ್‌ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು. ಮ್ಯಾನ್‌ಹಟನ್‌ ಜಿಲ್ಲಾ ಅಟಾರ್ನಿ ಕಚೇರಿಯ ಅಧಿಕಾರಿಗಳು ಭಾರತದ ರಾಯಭಾರಿ ತರಣ್‌ಜಿತ್‌ ಸಿಂಗ್ ಸಂಧು, ಕಾನ್ಸುಲ್ ಜನರಲ್ ರಂಧಿರ್ ಜೈಸ್ವಾಲ್‌ ಅವರಿಗೆ ಈ ಅಮೂಲ್ಯ ಕಲಾಕೃತಿಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ತರಣ್‌ಜಿತ್‌ ಸಿಂಗ್ ಸಂಧು, "ಇವು ಕಲೆಗೆ ಮಾತ್ರ ಸಂಬಂಧಿಸಿದ ವಸ್ತುಗಳಲ್ಲ, ಬದಲಾಗಿ ನಮ್ಮ ದೇಶದ ಪರಂಪರೆ, ಸಂಸ್ಕೃತಿ ಹಾದು ಧರ್ಮದ ಭಾಗ. ಇಂಥ ಪರಂಪರೆಯ ಅಮೂಲ್ಯ ವಸ್ತುಗಳು ಮರಳಿ ಸಿಕ್ಕಾಗ ಅವುಗಳನ್ನು ಸಾಕಷ್ಟು ಭಾವನೆಗಳಿಂದ ಸ್ವೀಕರಿಸಲಾಗುತ್ತದೆ. ಸದ್ಯದಲ್ಲೇ ಭಾರತಕ್ಕೆ ಇವುಗಳನ್ನು ಕಳುಹಿಸಿ ಕೊಡಲಾಗುವುದು" ಎಂದರು.  

ಒಟ್ಟು 105 ಪ್ರಾಚೀನ ಕಲಾಕೃತಿಗಳ ಪೈಕಿ 47 ಪೂರ್ವ ಭಾರತ, 27 ದಕ್ಷಿಣ ಭಾರತ, 22 ಮಧ್ಯ ಭಾರತ, 6 ಉತ್ತರ ಭಾರತ ಮತ್ತು 3 ಪಶ್ಚಿಮ ಭಾರತಕ್ಕೆ ಸೇರಿವೆ ಎಂದು ಕಾನ್ಸುಲೇಟ್‌ ಕಚೇರಿಯ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ:ಮೇಡ್ ಇನ್ ಇಂಡಿಯಾ ಡ್ರೋನ್‌ ಖರೀದಿ.. ಚೀನಾ, ಪಾಕ್​ ಗಡಿ ನಿರಂತರ ಕಣ್ಗಾವಲು

For All Latest Updates

ABOUT THE AUTHOR

...view details